Wednesday, January 22, 2025

ಬಿಜೆಪಿಯವರನ್ನು ದ್ರೋಹಿಗಳು ಎಂದ ಡಿ.ಕೆ ಶಿವಕುಮಾರ್

ಬೆಂಗಳೂರು : ಬಿಜೆಪಿಯವರನ್ನು ದ್ರೋಹಿಗಳು ಅಂತ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಛೇಡಿಸಿದರು. ಡಿಕೆಶಿ ಕೆಣಕಿದ ಬಳಿಕ ಬಿಜೆಪಿ ಕಲಿಗಳು ತಿರುಗಿಬಿದ್ದರು.

ವಿಧಾನಸಭೆಯಲ್ಲಿ ಮಾತನಾಡಿದ ಡಿಕೆಶಿ, ಮಾತು ಈಡೇರಿಸೋಕೆ ಆಗಿಲ್ಲ, ನಿಮಗೆ ಯೋಗ್ಯತೆ ಇಲ್ಲ. ಕೊಟ್ಟ ಮಾತು ಈಡೇರಿಸದ ನೀವು ದ್ರೋಹಿಗಳು. ಅದಕ್ಕೆ ಜನ ನಿಮ್ಮಲ್ಲಿ‌ ಅಲ್ಲಿ (ವಿರೋಧ ಪಕ್ಷದಲ್ಲಿ) ಕೂರಿಸಿದ್ದಾರೆ. ನಿಮ್ಮದೆಲ್ಲಾ ಬಯಲಾಗುತ್ತಿದೆ ಎಂದು ಬಿಜೆಪಿ ಸದಸ್ಯರಿಗೆ ದ್ರೋಹಿಗಳು ಅಂತ ಜರಿದರು.

ಬಿಜೆಪಿ ಪ್ರತಿಭಟನೆ ವಿಚಾರ ಕುರಿತು ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಒಳ್ಳೆದಾಗಲಿ. ತಪ್ಪು ಮಾಡಿದ್ರೆ ತಿದ್ದಲಿ. ನಮ್ಮ ಕಾರ್ಯಕ್ರಮ ಜನರಿಗೆ ತಲುಪಿಸುತ್ತಿದ್ದಾರೆ. ಜನರು ರೆಸ್ಟ್ ಕೊಟ್ಟಿದ್ದಾರೆ, ತಗೊಳ್ಳಲಿ. ಗಾಬರಿ ಯಾಕೆ ಎಂದು ಟಾಂಗ್ ಕೊಟ್ಟರು.

ಇದನ್ನೂ ಓದಿ : ಸದನದಲ್ಲಿ ವಿಪಕ್ಷಗಳ ಗ್ಯಾರೆಂಟಿ ಗದ್ದಲ: ಕಲಾಪ ಮುಂದೂಡಿಕೆ

ಸಮಯವನ್ನು ‌ಹಾಳು ಮಾಡ್ತಿದ್ದಾರೆ

ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಮತ್ತೆ ಸದನದ ಬಾವಿಗಳಿದರು. ನಿಲ್ಲಿಸಿ,‌ನಿಲ್ಲಿಸಿ, ಮೋಸ ನಿಲ್ಲಿಸಿ ಎಂದು ಘೋಷಣೆ ಕೂಗಿದರು. ಗ್ಯಾರಂಟಿ ಬಗೆಗಿನ ನಿಲುವಳಿ ಸೂಚನೆ ಬಗ್ಗೆ ಚರ್ಚಿಸುವಂತೆ ಬಿಜೆಪಿ ನಾಯಕರು ಪಟ್ಟು ಹಿಡಿದರು.

ಸದನದ ಸಮಯವನ್ನು ‌ಹಾಳು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ‌ಸದಸ್ಯರು ಕಿಡಿಕಾರಿದರು. ಆಗ ಸಭಾಪತಿಗಳು ಸದನವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು. ಕಚೇರಿಗೆ ಬರುವಂತೆ ಉಭಯ ಪಕ್ಷಗಳ‌ ನಾಯಕರಿಗೆ ಸಭಾಪತಿಗಳು ಮನವಿ ಮಾಡಿದರು.

RELATED ARTICLES

Related Articles

TRENDING ARTICLES