Wednesday, January 22, 2025

ಹಾಡಹಗಲೇ ಅಟ್ಟಾಡಿಸಿ ರೌಡಿಶೀಟರ್ನ ಬರ್ಬರ ಹತ್ಯೆ

ಹಾಸನ : ಹಾಡಹಗಲೇ ಅಟ್ಟಾಡಿಸಿ ರೌಡಿಶೀಟರ್‌ನ ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಧನಲಕ್ಷ್ಮೀ ಚಿತ್ರಮಂದಿರದ ಮುಂಭಾಗ ನಡೆದಿದೆ. 

ಮಾಸ್ತಿಗೌಡ (30) ಕೊಲೆಯಾದ ರೌಡಿಶೀಟರ್. ದುಷ್ಕರ್ಮಿಗಳು ನಡುರಸ್ತೆಯಲ್ಲಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ ಮಾಸ್ತಿಗೌಡನನ್ನು ಹತ್ಯೆ ಮಾಡಿದ್ದಾರೆ.

ಇನ್ನೋವಾ ಕಾರಿನಲ್ಲಿ ಬಂದ ನಾಲ್ಕೈದು ಯುವಕರ ಗುಂಪು ಈ ಕೃತ್ಯ ಎಸಗಿದ್ದಾರೆಂಬ ಆರೋಪವಿದೆ. ಮೃತ ಮಾಸ್ತಿಗೌಡ ಚನ್ನರಾಯಪಟ್ಟಣ ತಾಲ್ಲೂಕಿನ ಹೊನ್ನಮಾರನಹಳ್ಳಿ ಗ್ರಾಮದ ನಿವಾಸಿ. ಈತ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಇದನ್ನೂ ಓದಿ : ಡ್ಯಾನ್ಸ್ ವಿಚಾರಕ್ಕೆ ಗಲಾಟೆ : ಚಾಕುವಿನಿಂದ ಇರಿದು ಪಿಯು ವಿದ್ಯಾರ್ಥಿಯ ಬರ್ಬರ ಹತ್ಯೆ

ಬೆಚ್ಚಿಬಿದ್ದ ಚನ್ನರಾಯಪಟ್ಟಣ ಜನತೆ

ಚನ್ನರಾಯಪಟ್ಟಣ ಹೃದಯ ಭಾಗದಲ್ಲೇ ನಡೆದ ಬರ್ಬರ ಕೊಲೆಯಿಂದ ಜನತೆ ಬೆಚ್ಚಿಬಿದ್ದಿದ್ದಾರೆ. ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES