ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ತಾಕತ್ ಇದ್ರೆ, ಅಕ್ರಮದ ದಾಖಲೆ ಬಿಡುಗಡೆ ಮಾಡಲಿ ಎಂದು ಅರಸೀಕೆರೆ ಕಾಂಗ್ರೆಸ್ ಶಾಸಕ ಕೆ.ಎಂ ಶಿವಲಿಂಗೇಗೌಡ ಸವಾಲ್ ಹಾಕಿದರು.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಎಸ್ ಟಿ(Yst Tax) ಟ್ಯಾಕ್ಸ್ ಆರೋಪ ಮಾಡಿರುವ ಕುಮಾರಸ್ವಾಮಿಗೆ ತಿರುಗೇಟು ಕೊಟ್ಟರು.
ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಮಾಡಬಾರದು. ಯಾವುದಾದರೂ ದಾಖಲೆ ಇಟ್ಟಿದ್ದಾರೆ? ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಸುಮ್ಮನೆ ಬಾಯಿಗೆ ಬಂದಂತೆ ಕುಮಾರಸ್ವಾಮಿ ಮಾತನಾಡಬಾರದು ಎಂದು ಕುಟುಕಿದರು.
ಇದನ್ನೂ ಓದಿ : ವಿಪಕ್ಷಗಳು ಎಲ್ಲಿ ಬೇಕಾದರೂ ಪ್ರತಿಭಟನೆ ಮಾಡಿಕೊಳ್ಳಲಿ ಗ್ಯಾರೆಂಟಿಗಳು ಅನುಷ್ಟಾನ ಪಕ್ಕ:ಡಿಕೆಶಿ
ಜಿಲೇಬಿ, ಪಕೋಡ ಮಾರಿಸೋದಲ್ಲ
ಗ್ಯಾರಂಟಿ ಜಾರಿಗೆ ಆಗ್ರಹಿಸಿ ಬಿಜೆಪಿ ನಾಯಕರ ಪ್ರತಿಭಟನೆ ವಿಚಾರ ಕುರಿತ ಮಾತನಾಡಿ, ಬಿಜೆಪಿಯವರು ಎಲ್ಲರ ಅಕೌಂಟ್ ಗೆ ದುಡ್ಡು ಹಾಕ್ಸಿದ್ರಾ? ಅಚ್ಚೇ ದಿನ್ ಅಂದ್ರು, ಪಾನೀಪುರಿ ಹಾಕಲು ಕಲಿಸಿದ್ದಾರೆ. ಜಿಲೇಬಿ, ಪಕೋಡ ಮಾರಿಸೋದಲ್ಲ. ಜನರನ್ನು ಎಚ್ಚೆತ್ತಿಸೋದು ಹೀಗಲ್ಲ. ನಾವು ಕೆಲಸ ಮಾಡದಿದ್ರ ಲೋಕಸಭಾ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ. ಅಲ್ಲಿಯವರೆಗೂ ಕಾಯಬೇಕು ಎಂದು ಗುಡುಗಿದರು.
ಹೆಚ್ ಡಿಕೆ ನೋವಿನಿಂದ ಮಾತಾಡ್ತಿದ್ದಾರೆ
ಹೆಚ್ ಡಿಕೆ ಆರೋಪ ವಿಚಾರ ಕುರಿತು ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಯಾವ ಲಂಚನೂ ಇಲ್ಲ, ಯಾವುದೂ ಇಲ್ಲ. ಏನಾದ್ರೂ ದಾಖಲೆ ಇದ್ರೆ ಕೊಡಲಿ, ಲೋಕಾಯುಕ್ತಕ್ಕೆ ಹೋಗಿ ಕೊಡಲಿ. ಪಾಪ ಎಲೆಕ್ಷನ್ ನಲ್ಲಿ ಹಿನ್ನಡೆಯಾಗಿದೆ. ಕುಮಾರಸ್ವಾಮಿ ನೋವಿನಿಂದ ಮಾತಾಡ್ತಿದ್ದಾರೆ ಎಂದು ಕುಟುಕಿದರು.