Wednesday, January 22, 2025

ಆರ್​ವಿ ದೇಶಪಾಂಡೆ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ಕೊರತೆ; ರಸ್ತೆಇಲ್ಲದೆ ಕಂಬಳಿ ಜೋಳಿಗೆಯಲ್ಲಿ ರೋಗಿಯ ಸಾಗಾಟ

ಕಾರವಾರ : ಹಿರಿಯ ರಾಜಕಾರಣಿ ಆರ್.ವಿ  ದೇಶಪಾಂಡೆ ವಿಧಾನಸಭಾ ಕ್ಷೇತ್ರದಲ್ಲಿ ಜನರಿಗೆ ಮೂಲ ಸೌಕರ್ಯದ ಕೊರತೆ ಆರೋಪ ಕೇಳಿಬಂದಿದ್ದು ಸಂಪರ್ಕ ರಸ್ತೆ ಇಲ್ಲದೇ  ಅನಾರೋಗ್ಯ ಪೀಡಿತ ವೃದ್ದೆಯನ್ನ ಗ್ರಾಮಸ್ಥರು ಕಂಬಳಿಯ ಜೋಳಿಗೆಯಲ್ಲಿಯೇ ಹೊತ್ತೋಯ್ಯದ ಘಟನೆ ಜೋಯಿಡಾ ತಾಲೂಕಿನ ಸಣಕಾದ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ತೆರೆದ ಟ್ಯಾಂಕರ್​ನಲ್ಲಿ ಸತ್ತು ಬಿದ್ದ ಮಂಗಗಳು: ಅದೇ ನೀರು ಕುಡಿದ ಗ್ರಾಮಸ್ಥರು

ಸುಮಾರು 12 ಮನೆಗಳಿರುವ ಈ ಗ್ರಾಮದಲ್ಲಿ 100ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಈ ಗ್ರಾಮದಲ್ಲಿ ಮಳೆಗಾಲ ಬಂತೆಂದರೇ ಗ್ರಾಮಸ್ಥರಿಗೆ ವಿದ್ಯುತ್, ರಸ್ತೆ ಸಂಪರ್ಕವಿಲ್ಲದೇ ನರಕಯಾತನೆ ಅನುಭವಿಸುವ ಪರಿಸ್ಥತಿ ನಿರ್ಮಾಣವಾಗಿದೆ.

ಪ್ರತಿ ಚುನಾವಣೆಯಲ್ಲಿಯೂ ಮೂಲಸೌಕರ್ಯ ಕಲ್ಪಿಸುವ ಭರವಸೆ ನೀಡಿ ಆಯ್ಕೆ ಆಗುತ್ತಿರುವ ಆರ್ ವಿ ದೇಶಪಾಂಡೆ  ಸಚಿವರಾಗಿ, ಸರ್ಕಾರದ ಉನ್ನತ ಸ್ಥಾನ ಅಲಂಕರಿಸಿದ್ದರು ಈ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES