ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ವೈಎಸ್ ಟಿ(Yst Tax) ಟ್ಯಾಕ್ಸ್ ಆರೋಪಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ ತಿರುಗೇಟು ಕೊಟ್ಟರು.
ವಿಧಾನಸೌಧದ ಕೆಂಗಲ್ ಗೇಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನ ಆರಂಭವಾಗಿದೆ. ಕುಮಾರಸ್ವಾಮಿ ಅವರ ಬಳಿ ಯಾವುದಾದ್ರೂ ದಾಖಲೆ ಇದ್ರೆ ಕೊಡಲಿ. ಚರ್ಚೆ ಮಾಡೋಣ, ತನಿಖೆ ಕೂಡ ಮಾಡೋಣ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ಕೊಟ್ಟ ಭರವಸೆ ಈಡೇರಿಸುತ್ತಿದೆ. ಮಹಿಳೆಯರು ಶಕ್ತಿ ಯೋಜನೆಯ ಫಲ ಪಡೆಯುತ್ತಾ ಇದ್ದಾರೆ. ಆದಷ್ಟು ಬೇಗ ಎಲ್ಲ ಯೋಜನೆಗಳು ಅನುಷ್ಠಾನವಾಗಲಿವೆ. ಇದು ಬಿಜೆಪಿಗೆ ಸಹಿಸೋಕೆ ಆಗ್ತಾ ಇಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ನಂದು ಬಿಡ್ರಿ.. ಹಾಲಿ ಸಂಸದರ ಕಥೆ ಕೇಳಿ : ಹೆಚ್.ಡಿ ಕುಮಾರಸ್ವಾಮಿ
ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ
ನಾವು ಕೊಟ್ಟ ಎಲ್ಲ ಭರವಸೆಗಳು ಜಾರಿಯಾದ್ರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುತ್ತದೆ. ಇದನ್ನ ಸಹಿಸೋಕೆ ಆಗ್ತಾ ಇಲ್ಲ. ಅದಕ್ಕೆ ಪ್ರತಿಭಟನೆ ಅಂತೆಲ್ಲಾ ಹೊರಟಿವೆ. ವಿರೋಧ ಪಕ್ಷಗಳು ಪ್ರತಿಭಟನೆ ಮಾಡುವುದು ಸಾಮಾನ್ಯ, ಮಾಡಲಿ ಬಿಡಿ ಎಂದು ಹೇಳಿದರು.
ಬಿಟ್ ಕಾಯಿನ್ ಪ್ರಕರಣ ಕುರಿತು ಮಾತನಾಡಿದ ಅವರು, ಎಸ್ಐಟಿ (SIT) ತಂಡ ನಿನ್ನೆಯಿಂದ ತನಿಖೆ ಆರಂಭ ಮಾಡಿದೆ. ಎಸ್ಐಟಿ (SIT)ಗೆ ಯಾವುದೇ ಗಡುವು ನೀಡಿಲ್ಲ ಎಂದು ಡಾ.ಜಿ ಪರಮೇಶ್ವರ ಮಾಹಿತಿ ನೀಡಿದರು.