Wednesday, January 22, 2025

BSY ಕುಮಾರಸ್ವಾಮಿಗೆ, HDK ಯಡಿಯೂರಪ್ಪಗೆ ಸಪೋರ್ಟ್ ಮಾಡದೇ ಬೇರೆ ದಾರಿ ಇಲ್ಲ : ಚಲುವರಾಯಸ್ವಾಮಿ ಪಂಚ್

ಮಂಡ್ಯ : ಯಡಿಯೂರಪ್ಪ ಕುಮಾರಸ್ವಾಮಿಗೆ, ಕುಮಾರಸ್ವಾಮಿ ಯಡಿಯೂರಪ್ಪಗೆ ಸಪೋರ್ಟ್ ಮಾಡದೇ ಬೇರೆ ದಾರಿ ಇಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕುಟುಕಿದರು.

ಹೆಚ್ಡಿಕೆ ಹೋರಾಟಕ್ಕೆ ಯಡಿಯೂರಪ್ಪ ಸಂಪೂರ್ಣ ಬೆಂಬಲ ವಿಚಾರ ಕುರಿತು ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹೌದು, ಅವರು ಸಪೋರ್ಟ್ ಕೊಡಬೇಕಲ್ಲ. ಬಿಜೆಪಿಯವರಿಗೆ ಅದು ಬಿಟ್ಟು ಬೇರೆ ಏನು ದಾರಿಯಿದೆ ಹೇಳಿ. ಇಬ್ಬರು ಅಲೈನ್ಸ್ ಆಗ್ತಾರೋ, ಮರ್ಜ್ ಹಾಕ್ತಾರೋ ನನಗೆ ಗೊತ್ತಿಲ್ಲ. ಬಿಎಸ್ ವೈ ಹೆಚ್ ಡಿಕೆಗೆ, ಹೆಚ್ ಡಿಕೆ ಯಡಿಯೂರಪ್ಪಗೆ ಸಪೋರ್ಟ್ ಮಾಡಲೇ ಬೇಕು ಎಂದು ಟಾಂಗ್ ಕೊಟ್ಟರು.

ಇವ್ರು ವಿಲವಿಲ ಹೊದ್ದಾಡುತ್ತಿದ್ದಾರೆ

ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳೋದು ಕಾಂಗ್ರೆಸ್ ಪಕ್ಷ ಮಾತ್ರ. ಬಿಜೆಪಿ, ಜೆಡಿಎಸ್ ನಲ್ಲಿ ಆ ರೀತಿ ಆಗಲ್ಲ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಬಗ್ಗೆ ಕುಮಾರಸ್ವಾಮಿ ಮಾತನಾಡುವ ಅವಶ್ಯಕತೆ ಇಲ್ಲ. ನಮ್ಮ 5 ಉಚಿತ ಗ್ಯಾರಂಟಿ ಸಕ್ಸಸ್ ಫುಲ್ ಆಗಿ ನಡೆಯುತ್ತಿದೆ. ಅದಕ್ಕೆ ವಿಲವಿಲ ಹೊದ್ದಾಡುತ್ತಿದ್ದಾರೆ ಎಂದು ಛೇಡಿಸಿದರು.

ಇದನ್ನೂ ಓದಿ : ಬಿಜೆಪಿ ಪಕ್ಷ ಬುರುಡೆ ಪಕ್ಷ : ರಾಮಲಿಂಗಾರೆಡ್ಡಿ

ನಿಮ್ಮ ಪಂಚೆ ಸರಿ ಮಾಡ್ಕೊಳ್ಳಿ

ವಿಪಕ್ಷ ನಾಯಕನ ಆಯ್ಕೆ ವಿಳಂಬ ಕುರಿತು ಮಾತನಾಡಿ, ಸಿ.ಟಿ ರವಿ ಪಂಚೇ ಬಿಚ್ತೀವಿ ಅಂದ್ರಿದ್ರು. ಅದಕ್ಕೆ ನಾನು ಹೇಳಿದ್ದು, ಫಸ್ಟ್ ನಿಮ್ಮ ಪಂಚೆ ಸರಿ ಮಾಡ್ಕೊಳ್ಳಿ ಅಂತ. ಒಂದು ತಿಂಗಳಲ್ಲೇ ಪೂರ್ಣ ಪ್ರಮಾಣದ ಕ್ಯಾಬಿನೆಟ್ ಆಗಿದೆ. ಇಲ್ಲಿಯುವರೆಗೂ ವಿರೋಧ ಪಕ್ಷದ ನಾಯಕನನ್ನು ರಾಷ್ಟ್ರೀಯ ಪಕ್ಷ ಆಯ್ಕೆ ಮಾಡಿಲ್ಲ. ಅಲ್ಲಿಗೆ ಎಷ್ಟರ ಮಟ್ಟಿಗೆ ಆ ಸ್ಥಾನದ ಕೆಲಸ ಮಾಡುತ್ತೆ ಅರ್ಥ ಮಾಡ್ಕೊಳ್ಳಿ ಎಂದು ಚಾಟಿ ಬೀಸಿದರು.

ರಾಜ್ಯಪಾಲರು ಭಾಷಣ ಮಾಡುವ ಮುಂಚೆ‌ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುತ್ತಿದ್ದರು. ಆದ್ರೆ, ಇದುವರೆಗೂ ಅವರು ಮಾಡಿಲ್ಲ. ಇದು ದುರಂತವೇ ಸರಿ ಎಂದು ಚಲುವರಾಯಸ್ವಾಮಿ ಗುಡುಗಿದರು.

RELATED ARTICLES

Related Articles

TRENDING ARTICLES