Thursday, December 19, 2024

ಪೋಲಿಸರ ಬಲೆಗೆ ಬಿದ್ದ ಅಂತರಾಜ್ಯ ಬೈಕ್ ಕಳ್ಳರು

ಬೀದರ : ಜಿಲ್ಲೆ ಸೇರಿ ಹೊರರಾಜ್ಯಗಳಲ್ಲಿ ಬೈಕ್ ಕಳ್ಳತನ‌ ಮಾಡುತ್ತಿದ್ದ ಅಂತರಾಜ್ಯ ಖದೀಮನನ್ನ ಬೀದರ್ ನಗರ ಪೋಲಿಸರು ಹೆಡೆಮುರಿ ಕಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬೀದರ ನಗರದಾದ್ಯಂತ ಹೆಚ್ಚುತ್ತಿದ್ದ ಮನೆಗಳ್ಳತನ ಹಾಗೂ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ರೌಡಿ ನಿಗ್ರಹ ದಳವನ್ನು ಬೀದರ್ ನಗರ ಪೋಲಿಸರು ರಚಿಸಿ ಅಪರಾಧ ಕೃತ್ಯ ತಡೆಗಟ್ಟಲು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು.

ಇದನ್ನೂ ಓದಿ : ನಾವು ನಮ್ಮ ಭಾವನೆ ಹೇಳ್ತೀವಿ, ನೀವು ಬೆಂಕಿ ಹಚ್ಚಬೇಡಿ : ಶಾಸಕ ಯತ್ನಾಳ್ ಟಕ್ಕರ್

ಗಾಂಧಿ ಗಂಜ್ ಠಾಣಾ ವ್ಯಾಪ್ತಿಯ 2 ಪ್ರಕರಣ ಹಾಗೂ, ತೆಲಂಗಾಣ ರಾಜ್ಯದಲ್ಲಿ ನಡೆದಿದ್ದ 3 ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ಬಂಧಿತ ಆರೋಪಿಯಿಂದ ಐದು ಲಕ್ಷ ಮೌಲ್ಯದ ಒಟ್ಟು 5 ಬೈಕ್‌ಗಳನ್ನ ವಶಪಡಿಸಿಕೊಂಡಿದ್ದಾರೆ.

ಹಿರಿಯ ಅಧಿಕಾರಿಗಳ‌‌ ಮಾರ್ಗದರ್ಶನದಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ಚೀಯಾದ ಪೋಲಿಸರು ಹೀಗೆ ಒಟ್ಟು 5 ಪ್ರಕರಣಗಳನ್ನು ಭೇಡಿಸುವಲ್ಲಿ ಸಫಲರಾಗಿದ್ದಾರೆ. ಬೀದರ ನಗರ ಪೊಲೀಸರ ಕಾರ್ಯಕ್ಕೆ ಎಸ್‌ಪಿ ಚನ್ನಬಸವಣ್ಣ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಅಂತರಾಜ್ಯ ಖದೀಮನ ಹೆಡೆಮುರಿ ಕಟ್ಟಿದ ಪೊಲೀಸರು.

RELATED ARTICLES

Related Articles

TRENDING ARTICLES