Wednesday, January 22, 2025

ಮನೆಯಲ್ಲಿ ಮೀನಿನ ಅಕ್ವೇರಿಯಂ ಇಡುವುದು ಶುಭ ಅಥವಾ ಅಶುಭ ಸಂಕೇತವೇ..?

ಬೆಂಗಳೂರು : ಬಹುತೇಕ ಮಂದಿ ಮನೆಯಲ್ಲಿ ಅಲಂಕಾರಿಕ ವಸ್ತುವಾಗಿ ಮೀನಿನ ಅಕ್ವೇರಿಯಂ (Aquarium) ಇಡಲು ಇಷ್ಟಪಡುತ್ತಾರೆ. ಹಾಗಿದ್ರೆ, ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮನೆಯಲ್ಲಿ ಮೀನಿನ ಅಕ್ವೇರಿಯಂ ಇದ್ದರೆ ಶುಭ ಪ್ರಾಪ್ತಿಯಾಗುತ್ತಾ? ಇಲ್ಲವೇ? ಎಂಬ ಕುರಿತು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಪವರ್​ ಟಿವಿಗೆ ಮಾಹಿತಿ ನೀಡಿದ್ದಾರೆ.

ನಮ್ಮಲ್ಲಿ ಹಲವು ಆಚರಣೆಗಳಿಗೂ ಒಂದು ವೈಜ್ಞಾನಿಕವಾದ ಸತ್ಯಗಳು ಅಡಕವಾಗಿವೆ. ನಾವು ನಮ್ಮ  ಮನೆಗಳಲ್ಲಿ, ಕೈಗಾರಿಕೆಗಳಲ್ಲಿ, ಹೋಟೆಲ್‌ಗಳಲ್ಲಿ, ದೇವಸ್ಥಾನಗಳಲ್ಲಿ, ಆಧ್ಯಾತ್ಮಿಕ ಕೇಂದ್ರಗಳಲ್ಲಿ ಇನ್ನೂ ಮುಂತಾದ ಕಡೆಗಳಲ್ಲಿ ಮೀನಿನ ಕೊಳ (ಅಕ್ವೆರಿಯಂ) ಇಟ್ಟಿರುತ್ತಾರೆ. ಇನ್ನು ಇದು ವಾಸ್ತುಫಿಷ್, ಲಕ್ಕಿಫಿಷ್, ಗೋಲ್ಡ್ ಫಿಷ್, ಬ್ಲಾಕ್ ಫಿಷ್, ಹೀಗೆ ಹಲವಾರು ಮೀನುಗಳನ್ನು ಇಟ್ಟಿರುತ್ತಾರೆ. ನಮ್ಮ ಸನಾತನ ಪರಂಪರೆಯಲ್ಲಿ ಮೀನಿಗೆ ಒಂದು ಅತ್ಯುನ್ನತ ಸ್ಥಾನವಿದೆ. ಯಾಕಂದ್ರೆ, ಶ್ರೀಮನ್ನಾರಾಯಣದೇವರ ಮೊದಲ ಅವತಾರವೇ ‘ಮತ್ಸಾವತಾರ’

ಶ್ರೀ ನಾರಾಯಣದೇವರು ಮತ್ಯಾವತಾರವನ್ನು ತಾಳಿ ಜಗತ್ತನ್ನು ಕಾಪಾಡಿ ಅನೇಕ ಶಾಸ್ತ್ರಗಳನ್ನು, ಅನೇಕ ವನಸ್ಪತಿಗಳನ್ನು ಉದ್ದರಿಸಿ ಲೋಕ ಕಲ್ಯಾಣವನ್ನು ಉಂಟುಮಾಡಿದರು. ಈ ಮತ್ಸಾವತಾರವನ್ನು ಪ್ರಾರ್ಥನೆ ಮಾಡಿದರೆ ಸಾಕು, ನಮ್ಮೆಲ್ಲ ಪಾಪಗಳನ್ನು ಶ್ರೀಹರಿಯು ನಾಶಮಾಡಿ ಬಿಡುತ್ತಾನೆ. ಇಂತಹ ಮತ್ಸ್ಯ (ಮೀನು)ಗಳನ್ನು ನಾವು ನದಿ, ಕೆರೆ, ಬಾವಿ, ಸರೋವರ, ಸಮುದ್ರಗಳಲ್ಲಿ ನೋಡುತ್ತೇವೆ.

ಮತ್ಸ್ಯ(ಮೀನು)ಗಳಿಗೆ ನಮ್ಮ ಸನಾತನ ಪರಂಪರೆಯಲ್ಲಿ ಉನ್ನತ ಸ್ಥಾನವನ್ನು ನೀಡುತ್ತೇವೆ. ಆದರೆ, ಯಾವ ಶಾಸ್ತ್ರಗಳೂ ಮತ್ತು ಪುರಾಣಗಳೂ ಮನೆಯಲ್ಲಿ ಮೀನಿನ ಕೊಳ (ಅಕ್ವೆರಿಯಂ) ವನ್ನು ಸ್ಥಾಪಿಸುವ ಬಗ್ಗೆ ನಮಗೆ ತಿಳಿದಂತೆ ಎಲ್ಲಿಯೂ ಉಲ್ಲೇಖಿಸಿಲ್ಲ. ಆದರೆ ಕೆಲವೊಂದು ಜಾತಕದಲ್ಲಿ ದೋಷಗಳು ಇದ್ದಾಗ ಮತ್ಸ್ಯ ಪೂಜೆಯನ್ನು ಮಾಡುವ ಬಗ್ಗೆ ತಿಳಿಸಿದ್ದಾರೆ.

ಮನೆಯಲ್ಲಿ ಮೀನಿನ ಕೊಳ (ಅಕ್ಟೇರಿಯಂ) ಇಡುವುದು ಸೂಕ್ತವಲ್ಲ. ಮನೆಯಲ್ಲಿ ಮೀನಿನ ಕೊಳ (ಅಕ್ಟೇಲಿಯಂ) ದಿಂದ ಮನೆಯಲ್ಲಿ ಅನಾರೋಗ್ಯದ ಸಮಸ್ಸೆಗಳು ನಮ್ಮನ್ನು ಕಾಡಬಹುದು.

ಮೀನಿನ ಕೊಳ (ಅಕ್ಟೇಲಿಯಂ) ದಿಂದ ಆಗುವ ಅಪಾಯಗಳು 

ಇನ್ನೂ ಕೆಲವೊಂದು ಜನರಿದ್ದಾರೆ, ಅವರು ಹೇಳಿಕೊಳ್ಳುವುದೇನೆಂದರೆ, ಅಂಬಾನಿಯ ಮನೆಯಲ್ಲಿ ಅಕ್ಟೇರಿಯಂ ಇಟ್ಟಿದ್ದಾರೆ, ಅಂಬಾನಿಗೆ ಏನಾಗಿದೆ? – ಅಂತಹವರಿಗೆ ನಾವು ಏನೂ ಹೇಳುವುದಿಲ್ಲ. ಆದರೆ  ‘ಗೌತಮ್ ಅದಾನಿಯೇ ಆಗಲಿ, ವಿಜಯ ಮಲ್ಯ, ನೀರವ್ ಮೋದಿಯೇ’ ಆಗಲಿ ಈ ಪ್ರಕೃತಿಗೆ ತಲೆಬಾಗಬೇಕಾಯಿತು.

ಹಣ ಇರುವುದೆಂಬ ಗರ್ವವನ್ನು ಬಿಟ್ಟು ಸರಳತೆ ಯಿಂದ ನಡೆದುಕೊಳ್ಳಬೇಕು. ಪ್ರಕೃತಿಗೆ ಗೌತಮ್ ಅದಾನಿಯೂ ಒಂದೇ, ಅಂಬಾನಿಯೂ ಒಂದೇ ಅದ್ದರಿಂದ ನಮ್ಮ ಪ್ರಕಾರ ಮನೆಯಲ್ಲಿ ಮೀನಿನ ಕೊಳ (ಅಕ್ಟೇಲಿಯಂ) ಇಡುವುದನ್ನು ನಿಲ್ಲಿಸುವುದು ಒಳ್ಳೆಯದು.

ಸನಾತನ ಪರಂಪರೆಯಲ್ಲಿ ತಿಳಿಸುವ ವಾಸ್ತು ದೋಷ ಮತ್ತು ಪರಿಹಾರಗಳು  

ತಾಯಿ-ತಂದೆಯರ ಸೇವೆ ಮಾಡಿ. ದಿನದಲ್ಲಿ ಐದಾರು ಜನರಿಗಾದರೂ ಅನ್ನದಾನ ಮಾಡಿ. ನೀವು ಇನ್ನೊಬ್ಬರಿಗೆ ಅನ್ನದಾತರಾಗಿ, ಬದಲಾಗಿ ಅವರ ಅನ್ನಕ್ಕೆ ಕಲ್ಲು ಹಾಕದಿರಿ. ಸಾಧ್ಯವಾದಷ್ಟು ಪ್ರಕೃತಿಯನ್ನು ಪ್ರೀತಿಸಿ ಮತ್ತು ರಕ್ಷಿಸಿ.

ನೀವು ಮೊದಲು ಪರೋಪಕಾರವನ್ನು ಮಾಡಿ. ಒಳ್ಳೆಯದನ್ನೇ ಯೋಚಿಸಿ, ನಿಮಗೂ ಒಳಿತೇ ಆಗುತ್ತದೆ. ಒಳ್ಳೆಯದನ್ನೇ ಮಾಡಿ, ಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ.

 

 

 

RELATED ARTICLES

Related Articles

TRENDING ARTICLES