Sunday, December 22, 2024

ಕಾಂಗ್ರೆಸ್ ಸೇರ್ಪಡೆ ವದಂತಿ ಬಗ್ಗೆ ತೆರೆ ಎಳೆದ ಮಾಜಿ ಸಚಿವ ಮಾಧುಸ್ವಾಮಿ

ತುಮಕೂರು : ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಕಾಂಗ್ರೆಸ್ ಸೇರ್ತಾರೆ ಎಂದು ಹಬ್ಬಿದ್ದ ವದಂತಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ.

ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಕಾಂಗ್ರೆಸ್​ಗೆ ಹೋಗ್ತೀನಾ? ಎಂದು ಪ್ರಶ್ನೆ ಮಾಡಿದ್ದಾರೆ.

ನಾನು ಕಾಂಗ್ರೆಸ್​ಗೆ ಹೋಗ್ತಿನಿ ಅಂತ ಯಾವನೋ ಮುಟ್ಟಾಳ ಟಿವಿಗೆ ಹಾಕಿಸ್ತಾನೆ. ನಾನೇ ಕಾಂಗ್ರೆಸ್ ಸಿದ್ದಾಂತ ವಿರೋಧ ಮಾಡಿ ಆ ಪಕ್ಷಕ್ಕೆ ಸೇರ್ತಿನಾ? ಇಡೀ ಜೀವಮಾನದಲ್ಲಿ ಕಾಂಗ್ರೆಸ್ ವಿರೋಧ ಮಾಡಿಕೊಂಡು ಬಂದೋನು ನಾನು ಎಂದು ಗುಡುಗಿದ್ದಾರೆ.

ಇದನ್ನೂ ಓದಿ : ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಕಾಂಗ್ರೆಸ್ ಸೇರ್ತಾರೆ ಎಂದು ಹಬ್ಬಿದ್ದ ವದಂತಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ.

ನನಗೇನ್ರಿ ಬಂದಿದೆ ಅಂತಹ ದುಃಸ್ಥಿತಿ

ನನಗೇನ್ರಿ ಬಂದಿದೆ ಅಂತಹ ದುಃಸ್ಥಿತಿ ಕಾಂಗ್ರೆಸ್​ಗೆ ಹೋಗೋದು. ಜೆ.ಪಿ ಮೂಮೆಂಟಲ್ಲಿ ಹೋರಾಟ ಮಾಡಿದವರು ನಾವು. ನಾನು ಕಾಂಗ್ರೆಸ್​ಗೆ ಹೋಗ್ತಿನಾ? ನಾನು ಕಾಂಗ್ರೆಸ್​ಗೆ ಹೋಗ್ತಿನಿ ಅಂತ ನಮ್ಮ ಕಾರ್ಯಕರ್ತರು ತಲೆ ಕೆಡಿಸಿಕೊಂಡಿದ್ರು. ಅದೆಲ್ಲ ಸತ್ಯಕ್ಕೆ ದೂರವಾದ ಮಾತು ಅಂತ ವದಂತಿಗೆ ತೆರೆ ಎಳೆದಿದ್ದಾರೆ.

ಜೆ.ಸಿ ಮಾಧುಸ್ವಾಮಿ ಕಾಂಗ್ರೆಸ್ ಸೇರ್ತಾರೆ ಅಂತ ಇತ್ತೀಚೆಗೆ ನಡೆದ ಚುನಾವಣೆ ಸಮಯದಿಂದಲೂ ಮಾತುಗಳು ಕೇಳಿ ಬಂದಿತ್ತು. ಈ ಬಾರಿಯ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಧುಸ್ವಾಮಿ ಜೆಡಿಎಸ್‌ನ ಸುರೇಶ ಬಾಬು ವಿರುದ್ಧ ಪರಾಭವಗೊಂಡಿದ್ದರು.

RELATED ARTICLES

Related Articles

TRENDING ARTICLES