ಹಾಸನ : 37 ಕ್ಷೇತ್ರಗಳಲ್ಲಿ ಪಂಚಮಸಾಲಿ ಮತಗಳಿಂದ ಕಾಂಗ್ರೆಸ್ ಪಕ್ಷ ಗೆದ್ದಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿರೀಕ್ಷೆಗಿಂತ ಕಡಿಮೆ ಸೀಟು ಗೆದ್ದ ವಿಚಾರ ಕುರಿತು ಹಾಸನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಖಂಡಿತವಾಗಿಯೂ ನಾವು ಈ ಬಾರಿ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂಬ ನಿರೀಕ್ಷೆ ಇತ್ತು. ಮೂರು ಸಮಾಜವನ್ನು ಓಲೈಸಿಕೊಳ್ಳುವಲ್ಲಿ ನಾವು ವಿಫಲವಾಗಿದ್ದೇವೆ. ಮೂರು ಸಮಾಜ ನಮಗೆ ಮತ ನೀಡುತ್ತಾರೆ ಎಂಬ ವಿಶ್ವಾಸದಲ್ಲಿದ್ದೆವು. ಆದರೆ, ಇಂದು ನಮ್ಮ ಲೆಕ್ಕಾಚಾರ ತಪ್ಪಾಗಿದೆ. ಹಾಗಂತ ಪ್ರತಿ ಚುನಾವಣೆಯಲ್ಲೂ ಅದೇ ಇರುತ್ತದೆ ಎಂಬುದು ಅಲ್ಲ ಎಂದು ತಿಳಿಸಿದರು.
ಇದನ್ನೂ ಓದಿ : ಇನ್ನು ಎಷ್ಟು ದಿನ ಜನರನ್ನ ಭಿಕ್ಷುಕರ ರೀತಿ ಇಡ್ತೀರಾ? : ಕುಮಾರಸ್ವಾಮಿ ಕಿಡಿ
ಬಿಜೆಪಿಗೆ ಅವರು ವೋಟು ಹಾಕಿದ್ರಾ?
2008ರ ಚುನಾವಣೆಯಲ್ಲಿ ಲಿಂಗಾಯತ ಸಮಾಜದವರು ಮಾಸ್ ಆಗಿ ಬಿಜೆಪಿಗೆ ವೋಟು ನೀಡಿದ್ದರು. 2023ರಲ್ಲಿ ಬಿಜೆಪಿಗೆ ಅವರು ಮತ ಹಾಕಿದ್ರಾ? ಕಾಲ ಬಂದಂತೆ ಬದಲಾವಣೆ ಆಗುತ್ತದೆ. ಇನ್ನು 8 ರಿಂದ 9 ತಿಂಗಳಲ್ಲಿ ಯಾವ್ಯಾವ ರೀತಿ ಬದಲಾವಣೆ ತೆಗೆದುಕೊಳ್ಳುತ್ತದೆ ಅಂತ ನೋಡಬೇಕಿದೆ. ಈ ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತೆ ನೋಡೋಣ ಎಂದು ಹೇಳಿದರು.
8ಕ್ಕೆ 8 ಕ್ಷೇತ್ರಗಳನ್ನು ನಾವು ಸೋತಿದ್ದೆವು
ವಿಧಾನಸಭಾ ಚುನಾವಣೆ ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಧಾನಸಭಾ ಚುನಾವಣೆಯೇ ಬೇರೆ ಲೋಕಸಭಾ ಚುನಾವಣೆನೇ ಬೇರೆ. ಹೊಳೆನರಸೀಪುರದಲ್ಲಿ ಕಳೆದ ಬಾರಿ ಹೆಚ್.ಡಿ ರೇವಣ್ಣನವರು 47 ಸಾವಿರ ಲೀಡ್ ತಗೊಂಡಿದ್ರು. ನಾನು 75 ಸಾವಿರ ಲೀಡ್ ತಗೊಂಡೆ. ದೇವೇಗೌಡ್ರು 70,72 ಸಾವಿರ ಲೀಡ್ ತಗೊಳೋರು. ದೇವೇಗೌಡ್ರು ಸ್ಪರ್ಧಿಸಿದ್ದಾಗ 8ಕ್ಕೆ 8 ಕ್ಷೇತ್ರಗಳನ್ನು ನಾವು ಸೋತಿದ್ದೆವು. ಆಗ ದೇವೇಗವೌಡರು ಲೋಕಸಭೆ ಗೆಲ್ಲಲಿಲ್ವಾ? ಅಂತ ಪ್ರಶ್ನೆ ಮಾಡಿದರು.