Wednesday, December 25, 2024

ವಂದೇ ಭಾರತ್ ರೈಲಿಗೆ ಕಿಡಿಗೇಡಿಗಳಿಂದ ಕಲ್ಲು

ದಾವಣಗೆರೆ : ಕೇವಲ ನಾಲ್ಕು ದಿನಗಳ ಹಿಂದೆ ಆರಂಭವಾದ ಹೈಸ್ಪೀಡ್ ವಂದೇ ಭಾರತ್ ರೈಲಿಗೆ ಕಿಡಿಗೇಡಿಗಳು ಕಲ್ಲು ಎಸೆದ ಪರಿಣಾಮ ರೈಲಿನ ಕಿಟಕಿ ಗಾಜು ತೂತಾಗಿರುವ ಘಟನೆ ನಗರದ ಹೊರಲಯದ ಜಿಎಂಐಟಿ ಬಳಿ ನಡೆದಿದೆ.

ಇದನ್ನೂ ಓದಿ : ಎಲ್ಲಾ ನಿರುದ್ಯೋಗಿ ಯುವಕರಿಗೂ 3,000 ದುಡ್ಡು ಹಾಕಬೇಕು : ಅಶ್ವತ್ಥನಾರಾಯಣ ಆಗ್ರಹ

ನಿನ್ನೆ ಮಧ್ಯಾಹ್ನ ಧಾರವಾಡದಿಂದ ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿಗೆ ಕಿಡಿಗೇಡಿ ಕಲ್ಲು ಎಸೆದು ಪರಾರಿಯಾಗಿದ್ದಾರೆ. ಕಲ್ಲಿನ ಏಟಿಗೆ ರೈಲಿನ ಕಿಟಿಕಿ ಗಾಜು ತೂತಾಗಿದೆ,  ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಈ ಹಿಂದೆಯೂ ದಾವಣಗೆರೆ ಮತ್ತು ಅರಸೀಕೆರೆ ನಡುವಿನ ಹೊಸದುರ್ಗ, ಹೊಳಲ್ಕೆರೆ, ಚಿಕ್ಕಜಾಜಾರು ಭಾಗದಲ್ಲಿ ರೈಲಿಗೆ ಕಲ್ಲು ಎಸೆತ ಪ್ರಕರಣಗಳು ಹಲವು ಹಲವು ಬಾರಿ ನಡೆದಿದೆ. ಈ ಕುರಿತು ರೈಲ್ವೆ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES