Sunday, January 19, 2025

ಬಿಜೆಪಿಯಲ್ಲಿ ಯಾರಿಗೂ ಅಸಮಾಧಾನವಿಲ್ಲ : ಪ್ರಲ್ಹಾದ ಜೋಶಿ ಡ್ಯಾಮೇಜ್ ಕಂಟ್ರೋಲ್​

ಧಾರವಾಡ : ನಮ್ಮ ಪಕ್ಷದ ಮೇಲೆ ಯಾರಿಗೂ ಅಸಮಾಧಾನವಿಲ್ಲ, ಪರಸ್ಪರ ಭಿನ್ನಾಭಿಪ್ರಾಯದಿಂದ ಅಸಮಾಧಾನ ಹೊರಹಾಕಿದ್ದಾರಷ್ಟೇ, ಬಹಿರಂಗವಾಗಿ ಮಾತನಾಡದಂತೆ ಸೂಚಿಸಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಧಾರವಾಡದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೇಣುಕಾಚಾರ್ಯರಿಗೆ ಯಡಿಯೂರಪ್ಪನವರ ಆಪ್ತರೆಂದು ನೋಟಿಸ್ ಕೊಟ್ಟಿಲ್ಲ,ಯಾರನ್ನೆಲ್ಲ ಕರೆದಿದ್ದೇವಲ್ಲ ಅದರ ನೇತೃತ್ವವನ್ನು ಯಡಿಯೂರಪ್ಪನವರೇ ವಹಿಸಿದ್ದರು ಎಂದು ತಿಳಿಸಿದರು.

ಸ್ವತಃ ಯಡಿಯೂರಪ್ಪನವರೆ ರೇಣುಕಾಚಾರ್ಯರನ್ನು ಕರೆದು ಮಾತನಾಡಿದ್ದಾರೆ…

ಯಡಿಯೂರಪ್ಪನವರೆ ರೇಣುಕಾಚಾರ್ಯರನ್ನು ಕರೆಸಿ ಮಾತನಾಡಿದ್ದಾರೆ,ನಾನೂ ಸಹ ಇವತ್ತು ರೇಣುಕಾಚಾರ್ಯರೊಂದಿಗೆ ಮಾತನಾಡುವೆ. ನಮ್ಮದೂ ಒಂದು ಪರಿವಾರ ಇದ್ದಂತೆ ಎಂಬ ಮನವರಿಕೆಯನ್ನು ಮಾಡುವೆ ಎಂದು ಪಕ್ಷದಲ್ಲಿಯ ಒಳಬೇಗುದಿಯನ್ನು ಮುಚ್ಚಲು ಕೇಂದ್ರ ಸಚಿವರು ಮುಂದಾದರು.

ಇದನ್ನೂ ಓದಿ : ಕೆಲ ಬಿಜೆಪಿಗರು ನಮ್ಮ ಪಕ್ಷಕ್ಕೂ ಬರಬಹುದು : ಸಚಿವ ತಿಮ್ಮಾಪೂರ ಹೊಸ ಬಾಂಬ್

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲರವರ ಅಧ್ಯಕ್ಷತೆ, ಬಿಎಸ್‌ವೈ ನೇತೃತ್ವದಲ್ಲಿಯೇ ಸಭೆ ಆಗಿದೆ, ಇಲ್ಲಿ ಅವರ ಪರ, ಇವರ ಪರ ಎಂಬ ಪ್ರಶ್ನೆಯೆ ಇಲ್ಲ. ಅಲ್ಲದೆ ಯಾರೂ ಸಾರ್ವಜನಿಕವಾಗಿ ಹೇಳಿಕೆ ಕೊಡಬಾರದೆಂಬ ನಿಯಮ ಹೇಳಿದ್ದೇವೆ ಎಂದರು.

ಸದನದ ಒಳಗೂ-ಹೊರಗೂ ಪ್ರತಿಭಟನೆ ಮಾಡ್ತೇವೆ…

ನಾಳೆಯಿಂದ ಅಧಿವೇಶನ ಆರಂಭ ಹಿನ್ನೆಲೆಯಲ್ಲಿ ಸದನದ  ಒಳಗೆ ಮತ್ತು ಹೊರಗೆ ಬಿಜೆಪಿ ಪ್ರತಿಭಟನೆ ಮಾಡಲಿದೆ. ಅಲ್ಲದೆ ಕಾಂಗ್ರೆಸ್​ನವರ ಬೋಗಸ್ ಗ್ಯಾರಂಟಿ ಬಗ್ಗೆ ಹೋರಾಟ ಮಾಡುತ್ತೇವೆ ಎಂದ ಸಚಿವರು, ನೀವು 10ಕೆಜಿ ಅಕ್ಕಿಯ ಹಣ ಕೊಡಬೇಕು ಇಲ್ಲವೇ ಕ್ಷಮೆ ಕೇಳಬೇಕೆಂದು ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಿದರು.

ನಾವು 5ಕೆಜಿ ಹಣ ಕೊಡುತ್ತಿದ್ದೇವೆ..

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 5ಕೆಜಿ ಅಕ್ಕಿ ಕೊಡುತ್ತಿದ್ದಾರೆ ಎಂಬ ಸತ್ಯವನ್ನು ರಾಜ್ಯದ ಜನತೆಗೆ ಹೇಳಿ ,ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಜನರಿಗೆ 10 ಕೆಜಿ ಅಕ್ಕಿಯ ಹಣ ಕೊಡಬೇಕು ಎಂದು ಜೋಶಿ ಆಗ್ರಹಿಸಿದರು.

RELATED ARTICLES

Related Articles

TRENDING ARTICLES