Saturday, December 21, 2024

ಕುಮಾರಸ್ವಾಮಿ ಪ್ರಚಾರ ಪ್ರೀಯರು ಅದಕ್ಕೆ ಆರೋಪಿಸಿದ್ದಾರೆ : ಹೆಚ್.ಕೆ.ಪಾಟೀಲ್ ವ್ಯಂಗ್ಯ

ಗದಗ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರರ ಮೇಲೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಭ್ರಷ್ಟಾಚಾರ ಆರೋಪವನ್ನು ಪ್ರವಾಸೋಧ್ಯಮ ಸಚಿವ ಹೆಚ್.ಕೆ.ಪಾಟೀಲ್ ಅಲ್ಲಗಳೆದಿದ್ದಾರೆ.

ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ಇರಲಾರದನ್ನ ಆರೋಪ ಮಾಡಿದಂತೆ ಕಾಣುತ್ತದೆ ಈ ಆರೋಪವನ್ನು ಸರ್ವೇ ಸಗಟವಾಗಿ ತಳ್ಳಿಹಾಕುತ್ತೇನೆ ಎಂದು ಕಿಡಿ ಕಾರಿದರು.

ಈ ರೀತಿ ಯಾವುದೇ ತಪ್ಪು ನಮ್ಮ ಸರಕಾರದಿಂದ  ನಡೆದಿಲ್ಲ, ಮಾಧ್ಯಮದವರು ಒಂದು ಸುದ್ದಿ ಮಾಡೋಕೆ ಏನೋ ಒಂದು ಹೇಳಿರಬಹುದು . ಆದರೆ ಕುಮಾರಸ್ವಾಮಿಯವರ ಆರೋಪ ಸತ್ಯಕ್ಕೆ ದೂರವಾಗಿದೆ, ಅವರು ಪ್ರಚಾರಕ್ಕಾಗಿ ಆರೋಪ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ : ಕುಮಾರಣ್ಣ ಅವ್ರು ಹಿರಿಯರು, ರಾಜಕೀಯ ಮುತ್ಸದ್ದಿಗಳು : ನಯವಾಗಿ ತಿರುಗೇಟು ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್

ಶ್ರಮಪಡುವವರು ಒಬ್ಬರು, ಕುಳಿತುಕೊಂಡು ಊಟ ಮಾಡುವವರು ಇನ್ನೊಬ್ಬರು ಎಂಬ ಡಿ ಕೆ ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡ ಅವರು, ಶಿವಕುಮಾರ್ ಹೇಳಿರೋದು ರೈತರ ವಿಚಾರಕ್ಕೆ ಅದು ಸಿದ್ಧರಾಮಯ್ಯನವರ ವಿಷಯಕ್ಕಲ್ಲ,ರೈತ ಶ್ರಮ ಪಡುತ್ತಾನೆ ಅವನಿಗೆ ಸಂತೋಷ ಪಡೋಕೆ ಹೆಚ್ಚು ಅವಕಾಶ ಇರುವುದಿಲ್ಲ ಎಂದು ಡಿಕಿಶಿ ಹೇಳಿಕೆಗೆ ಆಸರೆಯಾದರು.

ಅಲ್ಲದೆ ಶಿವಕುಮಾರ್ ಅವರು ಮೂಲತಃ ಒಕ್ಕಲಿಗರು ಆಗಿದ್ದಕ್ಕೆ ಆ ರೀತಿ ಹೇಳಿರಬಹುದು ಇದನ್ನ ನೀವು ತಪ್ಪು ಭಾವಿಸಿದ್ದೀರಿ. ರೈತನಿಗೆ ಆಗುವ ನೋವನ್ನ ನೋವಿನಿಂದ ಹೇಳಿದ್ದಾರೆ ಅಷ್ಟೇ ಎಂದರು.

RELATED ARTICLES

Related Articles

TRENDING ARTICLES