Wednesday, January 22, 2025

ಏನಿದು ಮಹಾ ಆಪರೇಷನ್, ಶರದ್ ಪವಾರ್​ಗೆ ಸೆಡ್ಡು ಹೊಡೆದ NCPಯ ಶಾಸಕರ ಇನ್ ಸೈಡ್ ಸ್ಟೋರಿ ಇಲ್ಲಿದೆ ನೋಡಿ…

ಬೆಂಗಳೂರು : ಮಹಾರಾಷ್ಟ್ರ ಜನತೆಗೆ ನ್ಯಾಷನಲಿಷ್ಟ್ ಕಾಂಗ್ರೆಸ್ ಪಾರ್ಟಿಯ ಮುಖಂಡ ಅಜಿತ್ ಪವಾರ್, ಪೊಲಿಟಿಕಲ್ ನಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಅತೀ ದೊಡ್ಡ ಶಾಕ್ ನೀಡಿದ್ದಾರೆ. ಇಂದು ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಮೂಲಕ ಶಿಂಧೆ ಮತ್ತು ಫಡ್ನವಿಸ್ ಸರಕಾರದಲ್ಲಿ ಎರಡನೇ ಡಿಸಿಎಂ ಆಗುವ ಮೂಲಕ ಸಂಚಲನ ಮೂಡಿಸಿದ್ದಾರೆ….

ಮಹಾರಾಷ್ಟ್ರದಲ್ಲಿ ಮತ್ತೆ ರಚನೆಯಾದ ಮಹಾ ‘ಅಘಾಡಿ’ ಸರ್ಕಾರ…

ಎರಡನೇ ಬಾರಿಗೆ ಡಿಸಿಎಂ ಆದ ಎನ್ ಸಿಪಿಯ ಅಜಿತ್ ಪವಾರ್… ಹೌದು ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂದೆ ಸರ್ಕಾರಕ್ಕೆ ಬೆಂಬಲ ನೀಡಿ ಎರಡನೇಯ ಸಲ ಮಹಾ ಅಘಾಡಿ ಸರ್ಕಾರ ರಚನೆ ಮಾಡಲು ಎನ್ ಸಿಪಿಯ ನಾಯಕ ಅಜಿತ್ ಪವಾರ್, ಕಾರಣ ಕರ್ತರಾಗಿದ್ದಾರೆ.

ಅಲ್ಲದೆ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಸಮ್ಮಿಶ್ರ ಸರ್ಕಾರಕ್ಕೆ ತಮ್ಮ ಜೊತೆಯಿರುವ ಇಪ್ಪತ್ತೈದಕ್ಕೂ ಹೆಚ್ಚು ಶಾಸಕರ ಜೊತೆ ಬೆಂಬಲ ನೀಡಿರುವ ಅಜಿತ್ ಪವಾರ್, ಎರಡನೇ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಎನ್ ಸಿಪಿ ಸಂಸ್ಥಾಪಕ ನಾಯಕ ಶರದ್ ಪವಾರ್, ಇತ್ತೀಗಷ್ಟೇ ಬಿಜೆಪಿಗೆ ಬೆಂಬಲ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಅವರ ಪಕ್ಷದ ಹಾಗೂ ಕುಟುಂಬಸ್ಥ ಅಜಿತ್ ಪವಾರ್ ಇಂದು ದಿಢೀರ್ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಉಳಿದ ಎನ್‌ಸಿಪಿ ನಾಯಕರಾದ ಛಗನ್ ಭುಜಬಲ್ ಹಾಗೂ ದಿಲೀಪ್ ವಾಲ್ಸೆ, ಧನಂಜಯ್ ಮುಂಡೆ, ಹಸನ್ ಮುಶ್ರಿಫ್, ಧರ್ಮ್‌ರಾವ್ ಬಾಬಾ, ಆದಿತಿ ತಟಕಾರೆ, ಅನಿಲ್ ಪಾಟೀಲ, ಸಂಜಯ್ ಬನ್ಸೊಡೆ ಸೇರಿದಂತೆ 9 ಎನ್‌ಸಿಪಿಯ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ತ್ರಿಬಲ್ ಎಂಜಿನ್ ಸರ್ಕಾರ ರಚನೆಗ ಕಾರಣವಾಗಿದ್ದಾರೆ.

ಇದನ್ನೂ ಓದಿ : ಮಹಾರಾಷ್ಟ್ರ ನೂತನ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕಾರ.

ಮುಂಬಯಿಯ ರಾಜ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಮೇಶ್ ಬೈಸ್ ಶಾಸಕರಿಗೆ ಪ್ರಮಾಣವಚನ ಭೋದಿಸಿದ್ದಲ್ಲದೆ, ಜೊತೆಗೆ ಈಗಾಗಲೇ ಸರಕಾರದಲ್ಲಿ ಎರಡನೇ ಡಿಸಿಎಂ ಆಗಿರುವ ಅಜಿತ್ ಪವಾರ್ ಅವರು ತಮಗೆ 40 ಶಾಸಕರ ಬೆಂಬಲ ಇದೆ ಎಂದು ಬಿಜೆಪಿ ಮತ್ತು ಸಿಎಂ ಶಿಂದೆ ಬಳಿ ಹೇಳಿದ್ದಾರೆ. ಇದಕ್ಕೂ ಮುನ್ನ ಇಂದು ದಿಢೀರನೇ ಬೆಳಿಗ್ಗೆ ಅಜಿತ್ ಪವಾರ್ ಅವರು ಎನ್‌ಸಿ‍ಪಿ ಶಾಸಕರ ಸಭೆ ಕರೆದಿದ್ದರು. ಆ ನಂತರ ಅವರು ಶಿಂಧೆ ಸರ್ಕಾರಕ್ಕೆ ಬೆಂಬಲ ನೀಡುವ ಘೋಷಣೆಯನ್ನು ಮಾಡಿದ್ದರು.ಆದರೆ ಅಜಿತ್ ಪವಾರ್ ಅವರ ದಿಢೀರ್ ಬದಲಾವಣೆಯ ಈ ನಿರ್ಧಾರಕ್ಕೆ ಕಾರಣ ಏನೆಂಬುದು ನಿಗೂಢವಾಗಿಯೇ ಉಳಿದಿದೆ.

ಅಜೀತ್ ಪವಾರ್ ಮನವೊಲಿಕೆ ವಿಫಲ..!

ಇತ್ತೀಚೆಗೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅಧ್ಯಕ್ಷ ಸ್ಥಾನ ಬೇಡ ಅಂತಾ ಎಂದು ಹೇಳಿದ್ದರು. ಆದರೆ ಅಧ್ಯಕ್ಷ ಸ್ಥಾನಕ್ಕೆ ಅಜಿತ್ ಪವಾರ್ ಹೆಸರು ಉಲ್ಲೇಖ ಮಾಡದೆ ಇರೋದು ಇವತ್ತಿನ ದಿಢೀರ್ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಎನ್​ಸಿಪಿಯೊಂದಿಗೆ ಅಸಮಾಧಾನಗೊಂಡಿದ್ದ ಅಜಿತ್ ಪವಾರ್ ಅವರು ಎನ್‌ಸಿಪಿಯ ಕಾರ್ಯಾಧ್ಯಕ್ಷರಾಗಿ ಮುಂದುವರೆಯುವಂತೆ ಮನವೊಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಒಟ್ಟಿನಲ್ಲಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಕಾಡುತ್ತಿರುವ ಆಪರೇಷನ್ ಪಾರ್ಟಿ ಎಂಬ ರಾಜಕೀಯ ಪಿಡುಗು ಮಹಾರಾಷ್ಟ್ರದಲ್ಲಿ ಎರಡನೇಯ ಬಾರಿ ಕಾಲಿಟ್ಟಿದ್ದು ದಿನಕಳೆದಂತೆ ಯಾವ ರಾಜಕೀಯ ಅಲ್ಲೊಲ ಕಲ್ಲೊಲಗಳಿಗೆ ಕಾರಣವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ….

RELATED ARTICLES

Related Articles

TRENDING ARTICLES