ಚಿಕ್ಕೋಡಿ : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಬಂಧಸಿದ ಪೊಲೀಸರು ಸುಮಾರು 25 ಟ್ರ್ಯಾಕ್ಟರ್ ಹಾಗೂ ನಾಲ್ಕು ಜೆಸಿಬಿಗಳನ್ನು ವಶಕ್ಕೆ ಪಡೆದ ಘಟನೆ ಅಥಣಿ ತಾಲ್ಲೂಕಿನ ಮಹಿಷವಾಡಗಿಯಲ್ಲಿ ನಡೆದಿದೆ.
ಇದನ್ನೂ ಓದಿ: ಮತ್ತೆ ಡ್ರೋನ್ ಹಾರಿಸಿದ ಪ್ರತಾಪ್ : ಎಲೆಚುಕ್ಕಿ ರೋಗಕ್ಕೆ ಔಷಧಿ ಸಿಂಪಡಿಸಲು ಡ್ರೋನ್ ತಯಾರು
ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ ಹಿನ್ನಲೆ ಸ್ಥಳೀಯರು ಅಕ್ರಮವಾಗಿ ಮರಳು ಸಾಗಾಟಕ್ಕೆ ಇಳಿದಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ ಅಥಣಿ ಸಿಪಿಐ ರವೀಂದ್ರ ನಾಯಕೊಡಿ ನೇತೃತ್ವದಲ್ಲಿ ರಚನೆಯಾದ ಮೂವರು ಪಿಎಸ್‌ಐಗಳ ತಂಡ ದಾಳಿ ನಡೆಸಿ ಮರಳು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿ 25 ಟ್ರ್ಯಾಕ್ಟರ್ ಮತ್ತು ಜೆಸಿಬಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಅಥಣಿ ತಾಲೂಕಿನಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಾರಿಕೆಯನ್ನು ತಡೆಯಲು ಸ್ಥಳೀಯ ಮಟ್ಟದಲ್ಲಿ ಪೋಲಿಸ್ ಇಲಾಖೆಯ ಅಧಿಕಾರಿಗಳಿದ್ಧರೂ ಸಹ ಮರಳು ದಂಧೆಕೋರರನ್ನು ಮಟ್ಟಹಾಕಲು ಬೆಳಗಾವಿಯಿಂದ ಎಸ್ಪಿಯವರೇ ಫೀಲ್ಡಿಗಿಳಿಯುವುದನ್ನು ನೋಡಿದಾಗ ಅಥಣಿ ಪೋಲಿಸ್ ಇಲಾಖೆ ಅಕ್ರಮಗಳನ್ನು ತಡೆಯಲು ವಿಫಲವಾಯಿತೆ? ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.