Wednesday, January 22, 2025

ಗುರು ಪೂರ್ಣಿಮಾ 2023 : ಇದರ ಮಹತ್ವವೇನು? ಯಾವ ರಾಶಿಯವರಿಗೆ ಗುರುವಿನ ಅನುಗ್ರಹ ಪ್ರಾಪ್ತಿ?

ಬೆಂಗಳೂರು : ಗುರು ಪೂರ್ಣಿಮೆಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ.

ಗುರು ಪೂರ್ಣಿಮೆಗೆ ಆಚರಣೆ, ಯಾವ ರಾಶಿಯವರಿಗೆ ಶುಭಫಲ, ಪ್ರಯೋಜನ ಹಾಗೂ ತೊಂದರೆಗಳ ಬಗ್ಗೆ ಸಿದ್ದಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಜುಲೈ 3ರಂದು ಆಚರಿಸುವ ಗುರು ಪೂರ್ಣಿಮೆಯು ಜಾಗತಿಕವಾಗಿ ಅನೇಕ ಪ್ರಯೋಜನೆ ಹಾಗೂ ತೊಂದರೆಗಳನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಮೇಷದಲ್ಲಿ ಉಂಟಾಗಿರುವ ‘ಗುರು ಚಾಂಡಾಲ’ ಯೋಗವು ಅನೇಕ ಧಾರ್ಮಿಕ ಮುಖಂಡರಿಗೆ ಮತ್ತು ಅವರ ವರ್ಚಸ್ಸಿಗೆ ಕಪ್ಪು ಛಾಯೆಯನ್ನು ಮೂಡಿಸುತ್ತದೆ ಎಂದು ಹೇಳಿದ್ದಾರೆ.

ಮೇಷ, ತುಲಾ ಹಾಗೂ ವೃಶ್ಚಿಕ ರಾಶಿಯವರು ಎಚ್ಚರ

ಇದನ್ನೂ ಓದಿ : ಆಷಾಢ ಮಾಸ 2023 : ಯಾವ ರಾಶಿಗೆ ಗುರು ಬಲ? ಯಾವ ರಾಶಿಯವರಿಗೆ ಅಶುಭ?

ರೈತರು ಬೆಳೆಗಳನ್ನು ಬೆಳೆಯುವುದು ಉತ್ತಮ

ಸತ್ಯನಾರಾಯಣ ಪೂಜೆಯಿಂದ ಆಪತ್ತು ದೂರ

ಹರ ಮುನಿದರು ಗುರು ಕಾಯುವ ಎಂಬ ಮಾತನ್ನು ಮರೆಯದಿರಿ

ಗುರುಗಳ ಆಶೀರ್ವಾದ ಪಡೆದು ಧನ್ಯರಾಗುವ ಗುರು ಪೂರ್ಣಿಮಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು ಗುರುವನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ. ಈ ಬಾರಿ ಎರಡು ದಿನಗಳ ಕಾಲ ಗುರು ಪೂರ್ಣಿಮಾ ಹಬ್ಬ ಇರಲಿದೆ ಎಂದು  ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES