Wednesday, January 22, 2025

ಸುಳ್.. ಸುಳ್.. ಹೇಳ್ಯಾನಾ, ಆ ಕಂಡಕ್ಟರ್ ನ ಹಿಡ್ಕೊಂಡು ನಾಲ್ಕ್ ಒದೀರಿ

ಚಿಕ್ಕಮಗಳೂರು : ಸುಳ್.. ಸುಳ್.. ಹೇಳ್ಕಂಡ್ ಬಸ್ ನಿಲ್ಲಿಸ್ದೆ ಬಿಟ್ ಹೋಗ್ಯಾನಾ.. ಆ ಕಂಡಕ್ಟರ್‍ನ ಹಿಡ್ಕೊಂಡು ನಾಲ್ಕ್ ಒದೀರಿ.

ಇದು, ಉಚಿತ ಪ್ರಯಾಣ ಇದ್ರೂ ಬಸ್ ನಿಲ್ಲಿಸದೆ ಹೊರಟು ಹೋದ ಡ್ರೈವರ್ ಹಾಗೂ ಕಂಡಕ್ಟರ್ ವಿರುದ್ಧ ಉತ್ತರ ಕರ್ನಾಟಕ ಮಹಿಳೆಯರು ಆಕ್ರೋಶ ಹೊರಹಾಕಿದ ಪರಿ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕು ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಆ ಕಂಡಕ್ಟ್ರು ಹೋಗಲ್ಲ ಅಂತ ಬರೀ ಸುಳ್.. ಸುಳ್ಳೇ ಹೇಳ್ಯಾರಾ.. ಬರೀ ಹೆಣ್ ಮಕ್ಳೇ ಬಂದೀವಿ. ಇಲ್ಲಿ ಉಣ್ಣಕ್ ಇಲ್ಲ, ಏನ್ ಮಾಡಾಣಾ? ಫ್ರೀ ಬಸ್ ಬಿಟ್ಟಿರೋದ್ ಖುಷಿ ಆಗೈತಿ. ಆದ್ರೆ, ಬಿಟ್ಟೋಗ್ಯಾನಲ್ಲಾ ಆ ಕಂಡಕ್ಟ್ರು.. ಮಕ್ಕಳು-ಮರಿ ಇದಾವಾ, ಕುಡಿಯೋಕ್ ನೀರೂ ಇಲ್ಲ ಇಲ್ಲಿ ಅಂತ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : ಫ್ರೀ ಬಸ್ ಎಫೆಕ್ಟ್ : ಬಸ್ಸಿನಲ್ಲಿ ವೃದ್ದೆಗೆ ಕಪಾಳ‌ಮೋಕ್ಷ ಮಾಡಿದ ಕಂಡಕ್ಟರ್

ಕಂಡಕ್ಟರ್’ಗೆ ಮಹಿಳೆಯರ ಹಿಡಿಶಾಪ

ಫ್ರೀ ಬಸ್‍ನಲ್ಲಿ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಿಂದ ಸುಮಾರು 40ಕ್ಕೂ ಹೆಚ್ಚು ಮಹಿಳೆಯರು ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಬಂದಿದ್ದರು. ದೇವರ ದರ್ಶನ ಬಳಿಕ ಕಳಸ ಬಸ್ ನಿಲ್ದಾಣದಲ್ಲಿ ಬಾಗಲಕೋಟೆ, ಗದಗಕ್ಕೆ ಹೊರಟಿದ್ದರು. ಈ ವೇಳೆ ಮಹಿಳೆಯರಿಗೆ ಉಚಿತ ಪ್ರಯಾಣ ಇದ್ದರೂ ಬಸ್ ನಿಲ್ಲಿಸದೆ ಹೊರಟು ಹೋಗಿದ್ದಾರೆ. ಹೀಗಾಗಿ, ಡ್ರೈವರ್ ಹಾಗೂ ಕಂಡಕ್ಟರ್ ಗೆ ಹಿಡಿಶಾಪ ಹಾಕಿದ್ದಾರೆ.

40 ಮಂದಿಗೆ 10 ಆಟೋ ಬೇಕು

ಕಳಸದಿಂದ ಹೊರನಾಡಿಗೆ 10 ಕಿ.ಮೀ. ಆಗುತ್ತೆ. ಒಂದು ಆಟೋಗೆ 5 ಜನ ಅಂದ್ರು, 8ರಿಂದ 10 ಆಟೋ ಬೇಕು. ಫ್ರೀ ಬಸ್‍ನಲ್ಲಿ ಬಂದು ಆಟೋಗೆ ಸಾವಿರಾರು ರೂಪಾಯಿ ಕೊಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಮಹಿಳಾ ಪ್ರಯಾಣಿಕರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES