Thursday, December 19, 2024

ನಕಲಿ BPL ಕಾರ್ಡ್​ಗಳು ಇರುವವರ ಮೇಲೆ ಕ್ರಮ : ಜ್ಞಾನೇಂದ್ರ ಎಚ್ಚರಿಕೆ

ಬೆಂಗಳೂರು : ಅನಧಿಕೃತವಾಗಿ ಬಿಪಿಎಲ್ ಕಾರ್ಡ್​ಗಳನ್ನು ಹೊಂದಿರುವವರ ಮೇಲೆ ಸರ್ಕಾರದ ವತಿಯಿಂದ ಕ್ರಮ ಕೈಗೊಳ್ಳಲಾಗುವುದೆಂದು ಆಹಾರ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಜ್ಞಾನೇಂದ್ರ ತಿಳಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಅವರು, ಸರ್ಕಾರದಿಂದ ಅನ್ನಭಾಗ್ಯ ಯೋಜನೆ ಜಾರಿಯಾಗುತ್ತಿದೆ. ಸರ್ಕಾರದ ತೀರ್ಮಾದಂತೆ ಪಡೀತರದಾರರಿಗೆ ನೇರವಾಗಿ ಡಿಬಿಡಿ ಮೂಲಕ ಹಣ ಸಂದಾಯವನ್ನು ಮಾಡಲಾಗುವುದೆಂದು ತಿಳಿಸಿದರು.

ಈಗಾಗಲೇ ಅನರ್ಹ ಪಡೀತರದಾರರಿಗೆ ಕಾರ್ಡ್​ಗಳನ್ನು ರದ್ದು ಪಡಿಸಲು ಸಮಯಾವಕಾಶ ನೀಡಲಾಗಿತ್ತು. ಆದರೂ ಇನ್ನೂ ಬಾಕಿ ಉಳಿದಿರುವ ಅನರ್ಹ ಪಡೀತರದಾರರ ವಿರುದ್ದ ಕ್ರಮವನ್ನು ತೆಗೆದುಕೊಳ್ಳತ್ತೇವೆಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ತಮ್ಮ ನೆಚ್ಚಿನ ಶಿಕ್ಷಕರನ್ನು ವರ್ಗಾವಣೆ ಮಾಡದಂತೆ ಊಟ ಬಿಟ್ಟು ವಿದ್ಯಾರ್ಥಿಗಳ ಪ್ರತಿಭಟನೆ

ಡಿಬಿಡಿ ಮೂಲಕ ಹಣ ವರ್ಗಾವಣೆ ಮಾಡಿದರೆ ತಿಂಗಳಿಗೆ ಇಲಾಖೆಗೆ 100 ರಿಂದ 123 ಕೋಟಿ ಉಳಿತಾಯವಾಗುತ್ತದೆ. ಅಲ್ಲದೆ ಸಾರಿಗೆ ವೆಚ್ಚ ಮತ್ತು ಕಾರ್ಮಿಕರ ವೆಚ್ಚದಲ್ಲೂ ಉಳಿತಾಯವಾಗುತ್ತದೆ ಎಂದರು.

ಅಲ್ಲದೆ ಪಡಿತರ ಚೀಟಿಯಲ್ಲಿ ಯಾರು ಯಜಮಾನ ಆಗಿರುತ್ತಾರೋ ಅವರ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತೇವೆ ಎಂದ ಅವರು ಪಡಿತರದಲ್ಲಿ‌ರುವ ಯಜಮಾನರ ಬ್ಯಾಂಕ್ ಖಾತೆ ಲಭ್ಯವಿಲ್ಲದಿದ್ದಲ್ಲಿ ಎರಡನೇ ಯಜಮಾನರ ಖಾತೆಗೆ ಹಣ ಸಂದಾಯ ಮಾಡಲಾಗುತ್ತದೆ ಎಂದು ತಿಳಿಸಿದರು.

ಇನ್ನೂ ಪಡೀತರ ಚೀಟಿದಾರರ ಕುರಿತು ತಿಳಿಸಿದ ಅವರು ,ಈ ತಿಂಗಳ ಪಡಿತರ ಅಕ್ಕಿಯ ಹಣವನ್ನ ಜುಲೈ 15ರೊಳಗಾಗಿ ಡಿಬಿಟಿ ಮೂಲಕ ನೀಡುತ್ತೇವೆ. ರಾಜ್ಯದಲ್ಲಿ ಒಟ್ಟು 1.28 ಕೋಟಿ BPL ಪಡಿತರಿದ್ದಾರೆ
ಅದರಲ್ಲಿ 1.22ಕೋಟಿ ಪಡಿತರ ಕಾರ್ಡ್ ಗೆ ಆಧಾರ್ ಲಿಂಕ್ ಆಗಿದೆ ಎಂದು ಮಾಹಿತಿ ನೀಡಿದರು.

6 ಲಕ್ಷ ಬಿಪಿಎಲ್ ಕಾರ್ಡ್ ದಾರರ ಬ್ಯಾಂಕ್ ಅಕೌಂಟ್ ಇನ್ನೂ ಲಿಂಕ್ ಆಗಿಲ್ಲ ಹೀಗಾಗಿ ಈಗಿರುವ ಪಡಿತರಕ್ಕೆ 99.99% ಆಧಾರ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ, ಯಾರೆಲ್ಲ ಬ್ಯಾಂಕ್ ಅಕೌಂಟ್ ಹೊಂದಿಲ್ಲವೋ ಅವರು ಬ್ಯಾಂಕ್ ಅಕೌಟ್ ಮಾಡಿಸಬೇಕು ಎಂದು ಮನವಿ ಮಾಡಿದರು.

RELATED ARTICLES

Related Articles

TRENDING ARTICLES