Wednesday, January 22, 2025

ಮತ್ತೊಂದು ಕರಾವಳಿಯ ನೈಜ ಕಥೆಗೆ ‘ಟೋಬಿ’ ಢಮರುಗ

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿ, ರಿಲೀಸ್ ಡೇಟ್ ಸಮೇತ ಮಾಡಿದ ಕೆಲಸದ ಬಗ್ಗೆ ಹೇಳುವ ವರ್ಗವೊಂದಿದೆ. ಅದರಲ್ಲಿ ರಾಜ್ ಬಿ ಶೆಟ್ಟಿ ಕೂಡ ಒಬ್ಬರು.

ಹೌದು, ಸದ್ಯ ಟೋಬಿಯಿಂದ ಸ್ಯಾಂಡಲ್ ವುಡ್ ನ ಟಾಕ್ ಆಫ್ ದಿ ಟೌನ್ ಆಗಿದ್ದಾರೆ ರಾಜ್ ಬಿ ಶೆಟ್ಟಿ. ಶೆಟ್ರ ನ್ಯೂ ವೆಂಚರ್ ಕುರಿತ ಒಂದಷ್ಟು ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ ನೋಡಿ.

ಮೈಲಾರಿ, ಟಗರು ನಂತರ ಅಂಥದ್ದೇ ಶೈಲಿಯಲ್ಲಿ ಸ್ಯಾಂಡಲ್​ವುಡ್ ಅಂಗಳದಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ. ಅದೇ ಟೋಬಿ. ಇದು ಒಂದು ಮೊಟ್ಟೆಯ ಕಥೆ ಹಾಗೂ ಗರುಡ ಗಮನ ವೃಷಭ ವಾಹನ ಚಿತ್ರಗಳ ನಟ ರಾಜ್ ಬಿ ಶೆಟ್ಟಿ ಲೀಡ್​​ನಲ್ಲಿ ನಟಿಸಿರೋ ಸಿನಿಮಾ.

ಶೆಟ್ರ ನ್ಯೂ ಲುಕ್ ಗೆ ಪ್ರೆಕ್ಷಕರು ಥ್ರಿಲ್

ಇತ್ತೀಚೆಗಷ್ಟೇ ಗುದ್ದಾಡಲು ಸಜ್ಜಾಗಿರುವ ಕ್ರೋಧಭರಿತ ಟಗರು ದೊಡ್ಡದೊಂದು ಮೂಗುತಿಯೊಂದಿಗೆ ಇರುವ ಟೋಬಿ ಟೈಟಲ್ ಲಾಂಚ್ ಆಗಿತ್ತು. ಇದೀಗ ಅದೇ ದೊಡ್ಡ ಮೂಗುತಿಯೊಂದಿಗೆ ನಟ ರಾಜ್ ಬಿ ಶೆಟ್ಟಿ ಇರುವ ಫಸ್ಟ್​ಲುಕ್ ರಿವೀಲ್ ಆಗಿದೆ. ಶೆಟ್ರ ನ್ಯೂ ಲುಕ್ ಗೆ ಪ್ರೆಕ್ಷಕರು ಥ್ರಿಲ್ ಆಗಿದ್ದಾರೆ.

ಇದನ್ನೂ ಓದಿ : 7 ಸ್ಟಾರ್ ಸುಲ್ತಾನ ಕುರುಬಾನಿ ‘ಟಗರು ಪಲ್ಯ’ ಕ್ಯಾನ್ಸಲ್

ಇಡೀ ಸಿನಿಮಾದಲ್ಲಿ ಮೂಗುತಿ ಇರುತ್ತಾ?

ಇದು ಸದ್ಯ ಸ್ಯಾಂಡಲ್​ವುಡ್ ಅಂಗಳದಲ್ಲಿ ಹಲ್ ಚಲ್ ಕ್ರಿಯೇಟ್ ಮಾಡಿದೆ. ರಾಜ್ ಬಿ ಶೆಟ್ಟಿ ಇಡೀ ಸಿನಿಮಾ ಈ ಮೂಗುತಿ ಧರಿಸಿರಲ್ಲವಂತೆ. ಅದು ನನ್ನೊಳಗೆ ಹಾಗೂ ಪಾತ್ರದಲ್ಲಿ ಆಗುವಂತಹ ಬದಲಾವಣೆಯ ಪ್ರತೀಕವಾಗಿದೆ. ಸಿನಿಮಾದಲ್ಲಿ ಆ ಸೀಕ್ವೆನ್ಸ್ ಸಖತ್ ಕಿಕ್ ಕೊಡಲಿದೆ ಅಂತ ರಾಜ್ ಬಿ ಶೆಟ್ಟಿ ಹೇಳಿದ್ದಾರೆ.

ಆಗಸ್ಟ್ 25ಕ್ಕೆ ತೆರೆಗೆ ಬರ್ತಿದೆ ಟೋಬಿ

ಕ್ರೋಧ ಹಾಗೂ ಆಕ್ರಮಣಕಾರಿ ಪಾತ್ರವನ್ನ ರಾಜ್ ಬಿ ಶೆಟ್ಟಿ ಪೋಷಿಸಿದ್ದು, ಬಾಸಿಲ್ ಌಕ್ಷನ್ ಕಟ್ ಹೇಳಿದ್ದಾರೆ. ಮಾರಿ ಮಾರಿ ಮಾರಿಗೆ ದಾರಿ ಅನ್ನೋ ಟ್ಯಾಗ್​ಲೈನ್ ಇರೋ ಟೋಬಿ, ಹತ್ತು ಹಲವು ವಿಶೇಷತೆಗಳಿಂದ ಇದೇ ಆಗಸ್ಟ್ 25ಕ್ಕೆ ತೆರೆಗೆ ಬರ್ತಿದೆ.

RELATED ARTICLES

Related Articles

TRENDING ARTICLES