Sunday, January 19, 2025

ಬಿಜೆಪಿ ನಾಯಕರ ಬಾಯಿಗೆ ಬೀಗ ಹಾಕಲು ಆಗಲ್ಲ : ಡಿಕೆಶಿ ವ್ಯಂಗ್ಯ

ಬೆಂಗಳೂರು : ಬಿಜೆಪಿ ನಾಯಕರ ನುಡಿಮುತ್ತಗಳು ಅವರ ಆಚಾರ,ವಿಚಾರಗಳನ್ನು ತೋರಿಸುತ್ತಿವೆ, ಅವರಿಗೆ ಬೀಗ ಹಾಕಲು ಆಗಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.

ಬೆಂಗಳೂರಿನಲ್ಲಿಂದು ಮಾತನಾಡಿದ ಅವರು ಬಿಜೆಪಿ ಪಕ್ಷದಲ್ಲಿ ಭುಗಿಲೆದ್ದಿರುವ ಒಳ ಬೇಗುದಿಯ ಕುರಿತು ಬಿಜೆಪಿ ನಾಯಕರ ವಿರುದ್ದ ಕಿಡಿ ಕಾರಿದರು, ಹಿಂದೆಯೂ ಅವರಿಗೆ ಯಾರೂ ಬೀಗ ಹಾಕಿಲ್ಲ.. ಈಗಲೂ ಬೀಗ ಹಾಕಲ್ಲ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ : ಬಿಜೆಪಿ ಅವ್ರಿಗೆ ಮಾಡೋಕೆ ಇನ್ನೇನು ಕೆಲಸ ಇದೆ : ಸಚಿವ ವೆಂಕಟೇಶ್ ಗರಂ

ಅಲ್ಲದೆ ಕೇಂದ್ರದ ಏಕರೂಪ ನಾಗರಿಕ ಸಂಹಿತೆ ಜಾರಿಯ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷವಾಗಿದೆ,ಇದರ ಬಗ್ಗೆ ಪಕ್ಷ ಇಂಚಿಂಚೂ ಅಭಿಪ್ರಾಯ ತಿಳಿಸುತ್ತದೆ ಈಗ ಅದರ ಬಗ್ಗೆ ಪ್ರತಿಕ್ರಿಯಿಸಲ್ಲ ಇದು ನನ್ನ ನಿಲುವು ಎಂದು ಜಾರಿಕೊಂಡರು.

RELATED ARTICLES

Related Articles

TRENDING ARTICLES