Sunday, January 19, 2025

ಕೇಂದ್ರದಿಂದ ನಮ್ಮ ಮೇಲೆ ಗದಾ ಪ್ರಹಾರ : DCM ಡಿ.ಕೆ. ಶಿವಕುಮಾರ್ ಆಕ್ರೋಶ

ಬೆಂಗಳೂರು : ರಾಜ್ಯದಲ್ಲಿ 10 ಕೆಜಿ ಅಕ್ಕಿ ಕೊಡಿ ಎಂಬ ಬಿಜೆಪಿ ಒತ್ತಾಯದ ವಿಚಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರ ವಿರುದ್ದ ಗರಂ ಅಗಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಡಬಲ್ ಸ್ಟ್ಯಾಂಡ್ ಗೊತ್ತಾಗುತ್ತಿದೆ ಎಂದು ಛೇಡಿಸಿದರು.

ಮೊದಲು ಹಣ ಕೊಡಿ ಅಂತ ಹೇಳಿ ಈಗ ಹೋರಾಟ ಮಾಡಲು ತಯಾರಾಗಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ದ ಆಕ್ರೋಶಿತರಾದರು. ನಾವು ಈಗಾಗಲೇ ಮಾತು ಕೊಟ್ಟಿದ್ದೇವೆ, ಅಕ್ಕಿ ಸಿಗುವವರಿಗೂ ಹಣ ಕೊಡುತ್ತೇವೆ, ಮುಖ್ಯಮಂತ್ರಿಗಳು ಹಾಗೂ ಆಹಾರ ಸಚಿವರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಸಂದಾಯವಾಗಲಿದೆ ಎಂದು ಸ್ಪಷ್ಟಪಡಿಸಿದರು. ಈಗಾಗಲೇ ಶೇ 80 ರಿಂದ 85 ರಷ್ಟು ಅಕೌಂಟ್​​ಗಳು ಆಧಾರ್ ಜೋಡಣೆಯಾಗಿವೆ ಇನ್ನುಳಿದಂತೆ ಶೇ 15-20 ರಷ್ಟು ಖಾತೆಗಳು ಜೋಡಣೆಯಾಗಿಲ್ಲ ಎಂದ ಅವರು ಬಿಜೆಪಿಯವರು ಹೇಳಿದಂತೆ ಹಣ ನೀಡುತ್ತಿದ್ದೇವೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ :ಇಂದಿನಿಂದ ಬಿಜೆಪಿ ನಾಯಕರ ಕಣ್ಣಿಗೆ ನಿದ್ರೆನೇ ಹತ್ತಲ್ಲ : ಶಿವರಾಜ ತಂಗಡಗಿ

ಬಿಜೆಪಿಯವರ ಹೋರಾಟವನ್ನು ನಾವು ತಡೆಯಲ್ಲ, ಆದರೆ ಅವರು ಕೊಟ್ಟ ಭರವಸೆಗಳಿಗಾಗಿ ಅವರೇ ಹೋರಾಟ ಮಾಡಲಿ, ಈಗ ನಮ್ಮ ಗ್ಯಾರಂಟಿಗಳನ್ನು ಅವರು ಪ್ರಚಾರ ಮಾಡುತ್ತಿದ್ದಾರೆ  ಎಂದು ಮಾತಿನಲ್ಲೆ ತಿವಿದರು.

ಕೇಂದ್ರ ಬಿಜೆಪಿ ಸರ್ಕಾರ ನಮ್ಮ ಮೇಲೆ ಗದಪ್ರಹಾರ ಮಾಡುತ್ತಿದೆ, ರಾಜ್ಯದಲ್ಲಿರುವ ಎಫ.ಸಿ.ಐ ಗೋದಾಮುಗಳಲ್ಲಿ ಅಕ್ಕಿಗ ಹುಳು ಹಿಡಿಯುತ್ತಿದ್ದರೂ ಸಹ ,ನಮಗೆ ಒಳ್ಳೇಯ ಹೆಸರು ಬರುತ್ತದೆ ಎಂದು ಉದ್ದೇಶಪೂರ್ವಕವಾಗಿಯೇ ಅಕ್ಕಿ ನೀಡುತ್ತಿಲ್ಲ ಎಂದು ಕೇಂದ್ರವನ್ನು ದೂರಿದರು.

ಆದರೆ ನಾವು ದೀರ್ಘಾವಧಿಗೆ ಈ ಯೋಜನೆಯನ್ನು ರೂಪಿಸಿದ್ದೇವೆ. ಅಲ್ಲದೆ ರಾಜ್ಯದಲ್ಲೂ ಅಕ್ಕಿ ಬೆಳೆಗಾರರಿಗೆ ಸರ್ಕಾರ ಬೆಂಬಲಿಸುತ್ತದೆ ನಾವು ದೀರ್ಘಾವಧಿಗೆ ಯೋಜನೆ ರೂಪಿಸುತ್ತಿದ್ದೇವೆ.

ನಮ್ಮ ರಾಜ್ಯದಲ್ಲೂ ಅಕ್ಕಿ ಬೆಳೆಯುವರನ್ನು ಬೆಂಬಲಿಸುತ್ತೇವೆ ರಾಷ್ಟ್ರೀಯ ಮಟ್ಟದಲ್ಲಿ ಖರೀದಿ ಮಾಡುವ ಬೆಲೆಗೆ ಅಕ್ಕಿ ಸಿಗುವುದಾದರೆ ನಮ್ಮ ರೈತರನ್ನು ಮಾನಸಿಕವಾಗಿ ಸಿದ್ದಪಡಿಸುತ್ತೇವೆ ಎಂದು ತಿಳಿಸಿದರು.

ಈಗಾಗಲೇ ಎರಡು ತಿಂಗಳು ,ಆರು ತಿಂಗಳುಗಳ ಕಾಲ ಅಕ್ಕಿಯನ್ನು ಕೊಡಲು ಪಕ್ಕದ ರಾಜ್ಯದವರು ಸಿದ್ದರಾಗಿದ್ದರು. ಯಾವುದೇ ಕಾರಣಕ್ಕೂ ಮಧ್ಯದಲ್ಲಿ ನಿಲ್ಲಿಸಬಾರದು ಇದಕ್ಕೆ ಖಾಯಂ ಪರಿಹಾರ ಬೇಕು, ನಮಗೆ
ಬಿಜೆಪಿಯವರು ಕೊಟ್ಟ ಸಲಹೆಯನ್ನು ತಲೆಯಲ್ಲಿಟ್ಟುಕೊಂಡೆ ಈ ತೀರ್ಮಾನ ಮಾಡಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

RELATED ARTICLES

Related Articles

TRENDING ARTICLES