Monday, December 23, 2024

Amarnath Yatra 2023: ಇಂದಿನಿಂದ ಅಮರನಾಥ ಯಾತ್ರೆ ಆರಂಭ

ಬೆಂಗಳೂರು: ಹಿಂದುಗಳ ಪವಿತ್ರ ಯಾತ್ರೆ ಅಮರನಾಥಯಾತ್ರೆ(Amarnath Yatra) ಇಂದಿನಿಂದ ಶುರುವಾಗಲಿದೆ. ಈ ಯಾತ್ರೆಯ ಅವಧಿ ಈ ಬಾರಿ 62 ದಿನಗಳು ಇರಲಿದ್ದು, ಕೆಳದ ಬಾರಿಗಿಂತ ಶೇ.10ರಷ್ಟು ಹೆಚ್ಚು ಜನರು ಅಮರನಾಥಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. 

ಹೌದು, ಈ ಪವಿತ್ರಯಾತ್ರೆಯಲ್ಲಿ ಕಳೆದ ಬಾರಿಗಿಂತ ಈ ಸಲ 3 ಲಕ್ಷಕ್ಕಿಂತ ಹೆಚ್ಚು ಯಾಂತ್ರಿಕರು ಅಮರನಾಥಯಾತ್ರೆ ಮಾಡಲಿದ್ದಾರೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ 2ನೇ ಆಷಾಢ ಶುಕ್ರವಾರದ ಸಂಭ್ರಮ : ತಾಯಿ ದರ್ಶನಕ್ಕೆ ಬಸ್ ಫ್ರೀ

ಅಮರನಾಥಯಾತ್ರೆಯ ನೋಂದಣಿಯು ಏಪ್ರಿಲ್ 17 ಪ್ರಾರಂಭವಾಯಿತು. ಅಮರನಾಥ ಯಾತ್ರೆಯ ವೇಳಾಪಟ್ಟಿಯನ್ನು ಸಾಮಾನ್ಯವಾಗಿ ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಸ್ಕಂದಷಷ್ಠಿಯ ಶುಭ ದಿನದೊಂದಿಗೆ ಹೊಂದಿಕೆಯಾಗುವಂತೆ ಯೋಜಿಸಲಾಗಿದೆ ಮತ್ತು ರಕ್ಷಾ ಬಂಧನ ಎಂದೂ ಕರೆಯಲ್ಪಡುವ ಶ್ರಾವಣ ಪೂರ್ಣಿಮೆಯಂದು ಮುಕ್ತಾಯವಾಗುತ್ತದೆ.

ಅಮರನಾಥ ಯಾತ್ರೆಗೆ 3 ಲಕ್ಷ ಯಾತ್ರಿಗಳು ನೋಂದಣಿ

ಅಮರನಾಥ ಯಾತ್ರೆಗೆ 3 ಲಕ್ಷ ಯಾತ್ರಿಗಳು ನೋಂದಣಿ ಮಾಡಿಕೊಂಡು ಕಳೆದ ಬಾರಿಗಿಂತ ಶೇ.10ರಷ್ಟುಹೆಚ್ಚು ಜನರು ವಿವಿಧ ಮೂಲಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಯಾತ್ರಿಕರ ಪ್ರಯಾಣಕ್ಕೆ ಸುರಕ್ಷತಾ ಕ್ರಮ

ಯಾತ್ರಿಕರ ಮೊದಲ ತಂಡವು ಜೂ.30ರಂದು ಜಮ್ಮುವಿನಿಂದ ತೆರಳಲಿದೆ. ಯಾತ್ರೆಯುದ್ದಕ್ಕೂ ಜನರಿಗೆ ಅನುಕೂಲವಾಗಲು ಹಾದಿ ಸುಗಮಗೊಳಿಸಲಾಗಿದ್ದು, ಮಾರ್ಗದಲ್ಲಿ 5 ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ, ಹಿಡಿಕೆ ಕಂಬಿಗಳನ್ನು ಅಳವಡಿಸಲಾಗಿದೆ. ಅಂತರ್ಜಾಲ ಕಲ್ಪಿಸಲು ಎಲ್ಲ ಕಡೆ ಕೇಬಲ್‌ಗಳನ್ನು ಅಳವಡಿಸಲಾಗಿದೆ.

ಜನರ ಭದ್ರತೆ ಒತ್ತು 

ಜನರ ಭದ್ರತೆಯ ಆದ್ಯ ಕರ್ತವ್ಯವಾಗಿರುವ ಕಾರಣ ಚಾರಣದುದ್ದಕ್ಕೂ ಭದ್ರತಾ ಸಿಬ್ಬಂದಿ, ಡ್ರೋನ್‌ಗಳನ್ನು ನಿಯೋಜನ ಮಾಡಲಾಗಿದೆ. ಇದನ್ನು ಜಮ್ಮು ಕಾಶ್ಮೀರ ಪೊಲೀಸ್‌ ಆಯುಕ್ತರು ಪರಿಶೀಲನೆ ನಡೆಸಿದ್ದಾರೆ ಎಂದು ಅಮರನಾಥ ಯಾತ್ರೆ ಮಂಡಳಿ ಮುಖ್ಯಸ್ಥ ಮಂದೀಪ್‌ ಕುಮಾರ್‌ ಬಂಢಾರಿ ತಿಳಿಸಿದರು.

ಪವಿತ್ರ ಗುಹಾ ದೇವಾಲಯದ ನಿರ್ವಹಣೆಯನ್ನು ಶ್ರೀ ಅಮರನಾಥಜಿ ಶ್ರೈನ್ ಬೋರ್ಡ್ (SASB) ಗೆ ವಹಿಸಲಾಗಿದೆ, ಇದನ್ನು 2000 ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ಶಾಸಕಾಂಗದ ಕಾಯಿದೆಯಿಂದ ಸ್ಥಾಪಿಸಲಾಗಿದೆ, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು ಅದರ ಪದನಿಮಿತ್ತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES