Sunday, January 19, 2025

ಜಿಲ್ಲಾಧಿಕಾರಿ ವರ್ಗಾವಣೆಗೆ ಮಹಿಳೆಯ ಕಣ್ಣೀರು : ಚಿಕ್ಕಮಗಳೂರಲ್ಲೊಂದು ಅಪರೂಪದ ಘಟನೆ

ಚಿಕ್ಕಮಗಳೂರು : ಸರಕಾರಿ ಅಧಿಕಾರಿಗಳೆಂದರೆ ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ,ಜನರ ಕೆಲಸಗಳನ್ನು ಮಾಡಿಕೊಡಲು ನಾನಾ ಕಾರಣಗಳನ್ನು ಹೇಳಿ ಜನರ ಆಕ್ರೋಶಕ್ಕೆ ಗುರಿಯಾಗುತ್ತಾರೆಂಬ ಅನೇಕ ಸುದ್ದಿಗಳನ್ನು ನೋಡಿರುತ್ತೇವೆ.

ಆದರೆ ಇಲ್ಲಿ ಅದಕೆಲ್ಲ ವಿರುದ್ದವಾಗಿ ತಮ್ಮ ನೆಚ್ಚಿನ ಅಧಿಕಾರಿಯ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಕಣ್ಣೀರು ಹಾಕಿರುವ ಅಪರೂಪದ ಸನ್ನಿವೇಶಕ್ಕೆ ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಸಾಕ್ಷಿಯಾಯಿತು.

ಇದನ್ನೂ ಓದಿ : ಸಿದ್ದರಾಮಯ್ಯ ಏನು ಚಪ್ಪರಾಸಿ ಅಲ್ವಲ್ಲಾ? : ಸಿ.ಟಿ ರವಿ ವಾಗ್ದಾಳಿ

ಇಲ್ಲಿ 2 ವರ್ಷದಿಂದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನಮನ್ನಣೆ ಪಡೆದಿರುವ ಅಧಿಕಾರಿ ಕೆ.ಎನ್.ರಮೇಶ್ ಅವರ ವರ್ಗಾವಣೆಗೆ ಮಹಿಳೆ ಕಣ್ಣೀರು ಸುರಿಸಿದ್ದಾರೆ.

ತಮ್ಮ ಜಮೀನು ದಾಖಲೆಗಳನ್ನೆಲ್ಲ ಖುದ್ಧಾಗಿ ಮುತುವರ್ಜಿವಹಿಸಿ ಮಾಡಿಕೊಟ್ಟಿದ್ದನ್ನ ಸ್ಮರಿಸಿದ ಮಹಿಳೆ, ತಮ್ಮ ತೋಟದಲ್ಲಿ ಸಾವಯವ ಗೊಬ್ಬರದಿಂದ ಬೆಳೆದ ತರಕಾರಿ ನೀಡಿ ಭಾವುಕರಾಗುವ ಮೂಲಕ ನೆಚ್ಚಿನ ಅಧಿಕಾರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES