Wednesday, January 22, 2025

500 ರೂ. ಕಂತೆ ಕಂತೆ ನೋಟಿನೊಂದಿಗೆ ಸೆಲ್ಫಿ, ಪೇಚಿಗೆ ಸಿಲುಕಿದ ಯುಪಿ ಪೊಲೀಸಪ್ಪ

ಬೆಂಗಳೂರು : 500 ರೂಪಾಯಿ ಗರಿಗರಿ ನೋಟುಗಳ ಬಂಡಲ್‌ನೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟ ಯುಪಿ ಪೊಲೀಸಪ್ಪ ಪೇಚಿಗೆ ಸಿಲುಕಿದ್ದಾನೆ.

ಯುಪಿಯ ಉನ್ನಾವೋ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ರಮೇಶ್ ಚಂದ್ರ ಸಹಾನಿ ಎಂಬುವವರೇ ಪೇಚಿಗೆ ಸಿಲುಕಿದ ಪೊಲೀಸಪ್ಪ. ಇದೀಗ, ಈತ ವರ್ಗಾವಣೆ ಶಿಕ್ಷೆ ಅನುಭವಿಸಿದ್ದಾನೆ.

ರಮೇಶ್ ಚಂದ್ರ ಸಹಾನಿ ಅವರು ಬೆಹ್ತಾ ಮುಜಾವರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ. ಇವರು ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ 500 ರೂಪಾಯಿ ಕಂತೆ ಕಂತೆ ನೋಟುಗಳನ್ನು ರಾಶಿ ಹಾಕಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಇಷ್ಟಕ್ಕೆ ಸುಮ್ಮನಾಗಿದ್ದರೆ ಎಲ್ಲವೂ ಸರಿ ಇರುತ್ತಿತ್ತು.

ಅದೇ ಖುಷಿಯಲ್ಲಿ ರಮೇಶ್ ಚಂದ್ರ ಸಹಾನಿ ಫೋಟೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದರು. ಇದೀಗ ಆ ಫೋಟೋಗಳು ಭಾರೀ ವೈರಲ್​ ಆಗಿದೆ. ಪತ್ನಿ ಹಾಗೂ ಮಕ್ಕಳ ಜೊತೆಗಿನ ಸೆಲ್ಫಿ ಪೊಲೀಸ್ ಅಧಿಕಾರಿಗೆ ಕಂಟಕ ತಂದಿದೆ.

ಇದನ್ನೂ ಓದಿ : 41ರ ಆಂಟಿ ಜೊತೆ ಪೊಲೀಸಪ್ಪನ ಸಂಬಂಧ : ಮದುವೆಗೆ ಪಟ್ಟು ಹಿಡಿದಿದ್ದಕ್ಕೆ ಪರಾರಿ!

14 ಲಕ್ಷ ರೂ. ಮೌಲ್ಯದ ನೋಟು

ರಮೇಶ್ ಚಂದ್ರ ಸಹಾನಿ ಹಂಚಿಕೊಂಡ ಫೋಟೋಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಮನೆಯಲ್ಲಿ ಇಷ್ಟೊಂದು ದುಡ್ಡು ಎಲ್ಲಿಂದ ಬಂತು ಅಂತ ಪ್ರಶ್ನೆ ಮಾಡಿದ್ದರು. ಬಳಿಕ, ಅಧಿಕಾರಿಗಳು ರಮೇಶ್ ಚಂದ್ರ ವಿರುದ್ಧ ತನಿಖೆ ಆರಂಭಿಸಿದ್ದರು. ಆಗ, 14 ಲಕ್ಷ ರೂಪಾಯಿ ಮೌಲ್ಯದ 500 ರೂಪಾಯಿ ನೋಟಿನ 27 ಕಂತೆಗಳು ಇರುವುದು ಬಯಲಾಗಿದೆ.

ಈ ಬಗ್ಗೆ ಪ್ರಶ್ನಿಸಿದ ಅಧಿಕಾರಿಗಳಿಗೆ, 2021ರ ನವೆಂಬರ್ 14ರಂದು ನಮ್ಮ ಫ್ಯಾಮಿಲಿಯ ಆಸ್ತಿ ಮಾರಾಟ ಮಾಡಿದ್ದೆವು. ಅದರಿಂದ ಬಂದ ದುಡ್ಡು ಹಾಗೂ ಆಗ ಫೋಟೋ ಕ್ಲಿಕ್ಕಿಸಲಾಗಿದೆ ಎಂದು ರಮೇಶ್ ಚಂದ್ರ ಸಹಾನಿ ಸ್ಪಷ್ಟನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES