Saturday, November 2, 2024

ನಾಳೆಯಿಂದಲೇ ನಿಮ್ಮ ಖಾತೆಗೆ ಅನ್ನಭಾಗ್ಯ ಹಣ ಜಮೆ : ಸಚಿವ ಕೆ.ಎಚ್. ಮುನಿಯಪ್ಪ

ಬೆಂಗಳೂರು : ಪಡೀತರ ಚೀಟಿದಾರರಿಗೆ ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸಿಹಿ ಸುದ್ದಿ ನೀಡಿ, ನಾಳೆಯಿಂದಲೇ ಫಲಾನುಭವಿಗಳ ಅಕೌಂಟ್​ಗೆ ಹಣ ಜಮೆಯಾಲಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಾಳೆಯಿಂದಲೇ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಗುತ್ತಿದೆ,ಅಕ್ಕಿ ದಾಸ್ತಾನು ಸಂಗ್ರಹವಾಗುವವರೆಗೂ ಹಣ ನೀಡುತ್ತೇವೆ 1 ಕೆ.ಜಿ.ಗೆ 34 ರೂಪಾಯಿಯಂತೆ ಹಣ ನೀಡಲಾಗುವುದೆಂದು ತಿಳಿಸಿದರು.

ಈಗಾಗಲೇ ಶೇ 90 ರಷ್ಟು ಫಲಾನುಭವಿಗಳ ಅಕೌಂಟ್​ಗಳು ಇರುವ ಮಾಹಿತಿ ಇದೆ,ಯಾರು ಬ್ಯಾಂಕ್ ಖಾತೆ ತೆರೆದಿಲ್ಲವೋ ಅವರು ಖಾತೆಗಳನ್ನು ತೆರೆಯಬೇಕಾಗುತ್ತದೆ ಎಂದು ಹೇಳಿದರು.

ನಮಗೆ ಅಕ್ಕಿ ಪೊರೈಕೆಯಾಗದೆ ಕಾರಣ ತಾತ್ಕಾಲಿಕವಾಗಿ ಒಬ್ಬರಿಗೆ 170 ರೂಪಾಯಿ ಹಣ ನೀಡುತ್ತಿದ್ದೇವೆ,ಅಕ್ಕಿಯ ಲಭ್ಯತೆಯ ನಂತರ ಅದನ್ನು ವಿತರಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಅಲ್ಲದೆ ಮುಖ್ಯಮಂತ್ರಿಯವರು ಕೂಡ ಧಾನ್ಯಗಳನ್ನು ವಿತರಿಸುವುದಾಗಿ ತಿಳಿಸಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ರಾಗಿ,ಉತ್ತರ ಕರ್ನಾಟಕದಲ್ಲಿ ಜೋಳ ನೀಡುತ್ತೇವೆ. ಆದರೆ ರಾಗಿಯ ದಾಸ್ತಾನಿದೆ, ಜೋಳದ ದಾಸ್ತಾನಿಲ್ಲ ಇವುಗಳ ಸಂಗ್ರಹಣೆಯ ಬಳಿಕ ಧಾನ್ಯಗಳನ್ನು ಹಂಚಿಕೆ ಮಾಡುವುದಾಗಿ ಮುನಿಯಪ್ಪ ತಿಳಿಸಿದರು.

ಇದನ್ನೂ ಓದಿ : ಬಿಜೆಪಿ ನಾಯಕರ ಮಹತ್ವದ ಸಭೆ : ಯಾರಿಗೆ ಒಲಿಯಲಿದೆ ವಿಪಕ್ಷ ನಾಯಕನ ಸ್ಥಾನ

ಎಂಎಸ್ ಪಿಯ ಮೂಲಕ ಧಾನ್ಯಗಳನ್ನು ಖರೀದಿ ಮಾಡುತ್ತೇವೆ, ಅಲ್ಲದೆ ಎರಡು ಕೆಜಿ, ಜೋಳ/ರಾಗಿ ಕೊಡುತ್ತೇವೆ
ಎಂಟು ಕೆಜಿ ಅಕ್ಕಿ ಕೊಡುತ್ತೇವೆ ನಾವು ಮಾತು ಕೊಟ್ಟಂತೆ ಜುಲೈ ೧ರಿಂದ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಅನ್ನಭಾಗ್ಯದ ಜೊತೆಗೆ ಹಣಭಾಗ್ಯದ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಮನಸ್ಸು ಬದಲಾಯಿಸಿ ಅಕ್ಕಿ ಕೊಟ್ಟರೆ ಹಂಚಿಕೆ ಮಾಡುತ್ತೇವೆ. ಕೇಂದ್ರದ ಬಳಿ ಅಕ್ಕಿ ದಾಸ್ತಾನಿದ್ದರೂ ನೀಡುತ್ತಿಲ್ಲ. ನಾವು ಟೆಂಡರ್ ಕರೆದು ಅಕ್ಕಿ ಖರೀದಿ ಮಾಡುತ್ತೇವೆ ಈಗ ನಮ್ಮ ಬಳಿ ಹಣ ರೆಡಿಯಾಗಿದೆ ಕೊಟ್ಟ ಮಾತಿನಂತೆ ನಾಳೆಯೇ ಯೋಜನೆಯ ಲಾಭ ಜನರಿಗೆ ದೊರೆಯುತ್ತದೆ ಎಂದು ಸಚಿವರು ಹೇಳಿದರು.

RELATED ARTICLES

Related Articles

TRENDING ARTICLES