Wednesday, January 22, 2025

ಬಿಜೆಪಿ ಬಂಧನ ಮುಕ್ತವಾಗಲು ಆ ‘ಪಂಚೆ’ಯನ್ನ ಹರಿಯಲೇಬೇಕು : ಕಾಂಗ್ರೆಸ್ ಲೇವಡಿ

ಬೆಂಗಳೂರು : ಇಡೀ ಬಿಜೆಪಿ ಒಂದು ಪಂಚೆಯೊಳಗೆ ಬಂಧಿಯಾಗಿ ವಿಲವಿಲ ಒದ್ದಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಕುಟುಕಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಪಂಚೆ ಬಂಧನದಿಂದ ಹೊರಬರಬೇಕು ಎಂದರೆ ಆ ‘ಪಂಚೆ’ಯನ್ನು ಹರಿಯಲೇಬೇಕು ಎಂದು ಕಾಲೆಳೆದಿದೆ.

ದುಡಿಯದೆ, ಬೆವರು ಹರಿಸದೆ, ತಿರುಗದೆ, 4 ಮತವನ್ನು ಗಳಿಸುವ ಶಕ್ತಿಯೂ ಇಲ್ಲದ ಆ ‘ಸಂಘ’ಟನಾ ಕಾರ್ಯದರ್ಶಿಯ ವಿರುದ್ಧ ಮಾತನಾಡಿದ ಒಬ್ಬೇ ಒಬ್ಬ ವ್ಯಕ್ತಿ ಅಂದರೆ ರೇಣುಕಾಚಾರ್ಯ. ಬಿಜೆಪಿಯಲ್ಲಿ ಅವರು ಬದುಕುಳಿಯಲು ಸಾಧ್ಯವೇ? ಅಂತ ಕಾದು  ನೋಡಬೇಕು ಎಂದು ಛೇಡಿಸಿದೆ.

ಇದನ್ನೂ ಓದಿ : ಹಿಂದೂ-ಮುಸ್ಲಿಂ ಸಹೋದರರ ನಡುವೆ ಬೆಂಕಿ ಹಚ್ಚಬೇಡಿ : ಪರಮೇಶ್ವರಗೆ ಬಿಜೆಪಿ ತಿರುಗೇಟು

BSY ಬ್ರಿಗೇಡ್ ಪ್ರಶ್ನೆ ಸಮಂಜಸ

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬ್ರಿಗೇಡ್ ನವರ ಈ ಪ್ರಶ್ನೆ ಸಮಂಜಸ ಅಲ್ಲವೇ? ಯಡಿಯೂರಪ್ಪ ಅವರ ವಿರುದ್ಧ ಹಿನಾಯವಾಗಿ ಮಾತನಾಡುತ್ತಿದ್ದವರ ವಿರುದ್ಧ ಬಿಜೆಪಿ ಪಕ್ಷ ಒಂದೇ ಒಂದು ನೋಟಿಸ್ ನೀಡಲಿಲ್ಲ. ಆದರೆ, ಸಂತೋಷ ಕೂಟದ ವಿರುದ್ಧ ಮಾತನಾಡಿದ 24 ಗಂಟೆಯೊಳಗೆ ನೋಟಿಸ್ ನೀಡಲಾಗಿದೆ ಎಂದು ಚಾಟಿ ಬೀಸಿದೆ.

ಬಿಜೆಪಿ ನಾಯಕರೇ, BSY ಅಂದರೆ ಅಷ್ಟೊಂದು ತಾತ್ಸಾರವೇ? ಪಂಚೆ ಸಂತೋಷರ ಮೇಲೆ ಅಷ್ಟೊಂದು ಪ್ರೀತಿಯೇ? ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

RELATED ARTICLES

Related Articles

TRENDING ARTICLES