ಬೇಸಿಗೆಗಾಲ ಮುಗಿದ್ದು ಮಳೆಗಾಲ ಆರಂಭವಾಗುವ ಕಾಲದಲ್ಲಿ ಕೆಲವೊಂದು ಬದಲಾವಣೆಗಳು ನಮ್ಮ ಆರೋಗ್ಯದ ಮೇಲೆ ಆಗುತ್ತಾದೆ. ಇಂಥ ಸಮಯದಲ್ಲಿ ನಮ್ಮ ಆರೋಗ್ಯದಲ್ಲಿ ಕೆಲವು ಏರುಪೇರುಗಳು ಆಗಬಹುದು. ಇದರಿಂದ ನಾವು ಬಜಾವ್ ಆಗಲು ಮತ್ತು ಆರೋಗ್ಯದ ಕಾಳಜಿಯನ್ನು ವಹಿಸಲು ನಾವು ಮನೆಯಲ್ಲಿ ಬಳಸುವ ವಸ್ತುಗಳಿಂದ ನಮ್ಮ ಆರೋಗ್ಯದ ರಕ್ಷಣೆ ಮಾಡಬಹುದು ಹಾಗದ್ರೆ ಈ ನೀವು ನಿತ್ಯ ಜೀವನದಲ್ಲಿ ಈ ಸರಳ ಮಾರ್ಗವನ್ನು ಅನುಸರಿಸಿ.
- ಮಳೆಗಾಲದಲ್ಲಿ ನೀರು ಕಾಯಿಸಿ ಕುಡಿಯುವುದು ಒಳ್ಳೆಯುದು. ನೀರನ್ನು ಕಾಯಿಸುವಾಗ ಚಿಕ್ಕತುಂಡು ಶುಂಠಿ ಅಥವಾ ತುಳಸಿ ಹಾಕಿ. ನೀರು ಕುಡಿಯಿರಿ.
- ಥಂಡಿ ವಾತಾವರಣಕ್ಕೆ ಮಂಡಿ ನೋವು, ಸಂದಿವಾತಗಳಂತಹ ನೋವು ಕಾಣಿಸಿ ಕೊಳ್ಳುತ್ತವೆ. ಇದಕ್ಕೆ ಪರಿಹಾರವಾಗಿ ದನಿಯಾ, ಒಣಶುಂಠಿ ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಿ. ನೀರಿಗೆ ಬೆರೆಸಿ ಕಾಯಿಸಿ ದಿನಕ್ಕೆ ಎರಡು ಸಾರಿ ಇದನ್ನು ಕುಡಿಯಿರಿ.
- ನಿತ್ಯದ ಅಡುಗೆಯಲ್ಲಿ ತರಕಾರಿ ಸಾಂಬಾರಿನ ಬದಲಿಗೆ, ತೊಗರಿಬೇಳೆ, ಹುರುಳಿಕಟ್ಟಿನ ಸಾರನ್ನು ಬಳಸಿದರೆ, ಜೀರ್ಣಶಕ್ತಿಗೆ ಒಳ್ಳೆಯದು.
ಮಳೆಗಾಲದಲ್ಲಿ ನೀವು ಈ ಆಹಾರಗಳನ್ನು ಸೇವನೆ ಮಾಡಿ
ದಾಳಿಂಬೆ, ಮಾವಿನಕಾಯಿ ಸಾರು, ನೆಲ್ಲಿಕಾಯಿ (ಒಣಗಿದ) ಸಾರು, ನೆಲ್ಲಿಕಾಯಿ ಉಪ್ಪಿನಕಾಯಿ ಈ ಕೆಂಡದ ರೊಟ್ಟಿ ಸೇವನೆ ಹೆಸರುಕಾಳು, ಮಡಕೆ ಕಾಳು ಸೇವನೆ ಮಳೆಗಾಲದ ಉತ್ತಮ ಆಹಾರ.
ಚರ್ಮದ ಆರೈಕೆ ಬಗ್ಗೆ ಕೂಡ ಇರಲಿ ಕಾಳಜಿ
- ಮಳೆಗಾಲದಲ್ಲಿ ಹೆಚ್ಚು ಚರ್ಮ ಒರಟಾಗುತ್ತದೆ. ಮುಖದ ತ್ವಚೆಯೂ ಬಿರುಸಾಗುತ್ತದೆ. ಇದಕ್ಕೆ ಪರಿಹಾರವಾಗಿ, ಲೋಳೆಸರ ,ಬಾದಾಮಿ ಎಣ್ಣೆ, ಬೆಣ್ಣೆ, ಗುಲಾಬಿ ಜಲ(ರೋಸ್‌ವಾಟರ್). ಇವೆಲ್ಲವನ್ನೂ ಬೆರೆಸಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿಕೊಂಡರೆ, ಮುಖದ ಕಾಂತಿ ಹೆಚ್ಚುತ್ತದೆ.
- ರಾತ್ರಿ ಮಲಗುವಾಗ ತುಪ್ಪ ಅಥವಾ ಬೆಣ್ಣೆ, ಮಜ್ಜಿಗೆಯನ್ನು ತುಟಿಗೆ ಹಗುರವಾಗಿ * ಸಾಜ್ ಮಾಡಿಕೊಂಡರೆ,ತುಟಿ ಬಿರಿಯುವುದನ್ನು ತಡೆಯಬಹುದು.
- ಬಸ ಇರುವವರು ಆಯಾಸ, ಉಸಿರಾಟಕ್ಕೆ ತೊಂದರೆ ಇರುವವರು ಅರಿಸಿನ, ಮೆಣಸು, ಹಿಪ್ಪಲಿ, ದ್ರಾಕ್ಷಿ, ಬೆಲ್ಲ, ಖಚೋರ, ಶುಂಠಿ ಇವೆಲ್ಲವನ್ನು ಸುಭಾಗದಲ್ಲಿ ಪುಡಿ ಮಾಡಿಟ್ಟುಕೊಳ್ಳಿ ನಿಮ್ಮ ಚರ್ಮದ ಕಾಳಜಿ ವಹಿಸಿ
ನಾವು ಈ ಸರಳ ಮಾರ್ಗಗಳನ್ನು ಅನುಸರಿಸಿದ್ದಾರೆ ಉತ್ತಮ ಆರೋಗ್ಯವನ್ನು ಕಾಪಡಿಕೊಳ್ಳಬಹುದು.