Sunday, January 19, 2025

ಕಾಂಗ್ರೆಸ್ ಬರಲು ಕ್ರೈಸ್ತರು ಕಾರಣ, ನಮ್ಮ 16 ಬೇಡಿಕೆ ಈಡೇರಿಸುವಂತೆ ಸಿಎಂಗೆ ನಿಯೋಗ ಮನವಿ

ಬೆಂಗಳೂರು : ಕ್ರಿಶ್ಚಿಯನ್ ಸಮುದಾಯದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, 16 ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದೆ.

ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಫೋರಂ ನೇತೃತ್ವದಲ್ಲಿ ಕ್ರೈಸ್ತ ಪಾದ್ರಿಗಳು ಮತ್ತು ಕ್ರೈಸ್ತ ಸಂಘಟನೆಗಳ ನಾಯಕರು ಗೃಹ ಕಚೇರಿ ಕೃಷ್ಣದಲ್ಲಿ ಶುಕ್ರವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ತಮ್ಮ ಸಮುದಾಯಗಳ ಸಮಸ್ಯೆಗಳನ್ನು ಚರ್ಚಿಸಿದರು.

ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಯೋಗದ ವಿಕ್ರಮ್ ಆಂಟೋನಿ, ಕಾಂಗ್ರೆಸ್ ಸರ್ಕಾರ ಬರಲು ಕ್ರೈಸ್ತರು ಕಾರಣ. ಹೀಗಾಗಿ, ನಮ್ಮ ಸಮುದಾಯಕ್ಕೆ ಸರ್ಕಾರ ಸಹಕಾರ ನೀಡಬೇಕು ಅಂತ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ : ಸಿದ್ದರಾಮಯ್ಯ ಜೊತೆ ಮುಸ್ಲಿಂ ಮುಖಂಡರ ಮಾತುಕತೆ

ಸುಳ್ಳು ಕೇಸ್ ವಾಪಸ್ ಪಡೆಯಿರಿ

16 ಬೇಡಿಕೆಗಳನ್ನು ಸಿಎಂಗೆ ಸಲ್ಲಿಕೆ ಮಾಡಿದ್ದೇವೆ. ಮತಾಂತರ ಕಾಯ್ದೆ ರದ್ದು ಮಾಡಬೇಕು. ಮತಾಂತರ ಕೇಸ್ ಬಂದಿರುವುದರಿಂದ ಅನೇಕರ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ಇದನ್ನ ವಾಪಸ್ ಪಡೆಯಬೇಕು. ಮುಸ್ಲಿಂ ಭವನದಂತೆ ಕ್ರೈಸ್ತ ಭವನ ನಿರ್ಮಾಣ ಮಾಡಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

1 ಸಾವಿರ ಕೋಟಿ ಮೀಸಲಿಡಬೇಕು

ಇದಲ್ಲದೆ, ಬಜೆಟ್ ‌ನಲ್ಲಿ ಕ್ರೈಸ್ತ ಸಮುದಾಯಕ್ಕೆ‌ 1 ಸಾವಿರ ಕೋಟಿ ರೂ. ಮೀಸಲಿಡಬೇಕು. ಕ್ರಿಶ್ಚಿಯನ್ ಡೆವಲಪ್ಮೆಂಟ್ ಕೌನ್ಸಿಲ್ ಬದಲಾಗಿ ಕ್ರಿಶ್ಚಿಯನ್ ಡೆವಲಪ್ಮೆಂಟ್ ಕಾರ್ಪೋರೇಷನ್ ಮಾಡಬೇಕು. ಕ್ರೈಸ್ತರಿಗೆ ಅಂತ್ಯ ಸಂಸ್ಕಾರ ಮಾಡಲು‌ ಜಾಗದ ಕೊರತೆ‌ ಇದೆ. ಹೀಗಾಗಿ, ಕ್ರೈಸ್ತ ಸಮುದಾಯಕ್ಕೆ ಸ್ಥಳ ಕೊಡಬೇಕು ಎಂದು ಹೇಳಿದ್ದಾರೆ.

ಕ್ರೈಸ್ತರಿಗೆ ಸಮುದಾಯ ಭವನ ಕೊಡಬೇಕು. ಎಸ್ಸಿ(SC)ಯಿಂದ ಕನ್ವರ್ಟ್ ಆಗುವ ಕ್ರೈಸ್ತರಿಗೆ ತಹಶೀಲ್ದಾರರಿಂದ ಸರ್ಟಿಫಿಕೇಟ್ ಕೊಡಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

RELATED ARTICLES

Related Articles

TRENDING ARTICLES