Wednesday, January 22, 2025

ಇಷ್ಟಾರ್ಥಗಳನ್ನು ಈಡೇರಿಸುವ ದರ್ಗಾ : ಭಾವೈಕ್ಯತೆಯ ಸಂಕೇತ ಈ ನಾನಿ ಸಾಹೇಬ್ ದರ್ಗಾ

ಬೀದರ : ಜಿಲ್ಲೆಯ ಭಾಲ್ಕಿ ತಾಲೂಕಿನ ಕೋನಮೆಳಕಂದಾ ಗ್ರಾಮದಲ್ಲಿರುವ ನಾನಿ ಸಾಹೇಬ್ ದರ್ಗಾ ಭಾವ್ಯಕ್ಯತೆಯನ್ನು ಸಾರುವ ಧಾರ್ಮಿಕ ಸ್ಥಳವಾಗಿದೆ.

ಪ್ರತೀ ವರ್ಷವೂ ಗುರು ಪೌರ್ಣಿಮೆಯ ಮುನ್ನ ಬರುವ ಶುಕ್ರವಾರದಂದು ಅಂದರೆ ನಾಳೆ ಇಲ್ಲಿ ನಡೆಯಲಿರುವ ಜಾತ್ರೆಗೆ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ. ಈ ಕೋನಮೆಳಕಂದಾ ಗ್ರಾಮದ ಅರಣ್ಯ ಪ್ರದೇಶದ ನಡುವೆ ಇರುವ ನಾನಿ ಸಾಹೇಬ್ ದರ್ಗಾಕ್ಕೆ ಜಾತ್ರೆಯ ಹಿನ್ನೆಲೆಯಲ್ಲಿ ಭಕ್ತರ ದಂಡೇ ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಸುಮಾರು 300 ವರ್ಷಗಳ ಇತಿಹಾಸವಿರುವ ಈ ದರ್ಗಾಕ್ಕೆ ಬಂದು ಹರಕೆ ಹೊತ್ತುಕೊಂಡರೆ ಕೋರಿಕೆಗಳೆಲ್ಲ ಈಡೇರುವ ಅಪಾರವಾದ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರಲ್ಲಿದೆ. ಹಿಂದೂ-ಮುಸ್ಲಿಂ ಎಂಬ ಭೇದ ಭಾವಗಳನೆಲ್ಲ ಮೀರಿ ಬೇಡಿದ ವರವನ್ನು ಕರುಣಿಸುವ ಪುಣ್ಯ ಸ್ಥಳವಾಗಿದೆ ಎಂಬ ಪವಿತ್ರ ಭಾವ ಭಕ್ತರ ಮನದಲ್ಲಿದೆ.

ಇದನ್ನೂ ಓದಿ : ‘ಪಂಚೆ ಪಡೆ’ ಗೆಲ್ಲುವುದೋ, BSY ಬ್ರಿಗೇಡ್ ಗೆಲ್ಲುವುದೋ? : ಕಾಂಗ್ರೆಸ್ ವ್ಯಂಗ್ಯ

ಕೇವಲ ಈ ಜಿಲ್ಲೆಯ ಜನರಷ್ಟೇ ಅಲ್ಲದೆ ಪಕ್ಕದ ತೆಲಂಗಾಣ,ಮಹಾರಾಷ್ಟ್ರಗಳಿಂದಲೂ ಇಲ್ಲಿಗೆ ಆಗಮಿಸುತ್ತಾರೆನ್ನುವುದು ವಿಶೇಷವಾಗಿದೆ.

ಕಂಕಣ ಭಾಗ್ಯ,ಕೌಟುಂಬಿಕ ಸಮಸ್ಯೆಗಳು ಸೇರಿದಂತೆ ಅನೇಕ ಖಾಯಿಲೆಗಳಿಗೂ ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿದರೆ ವಾಸಿಯಾಗುತ್ತವೆ ಎಂಬುದು ಜನರ ನಂಬಿಕೆಯಾಗಿದೆ.

ದಿನಬೆಳಗಾದರೆ ಕೋಮು ಸಂಘರ್ಷದ ಬಗ್ಗೆ ಮಾತಾಡುವ ಜನರಿಗೆ ಈ ಗ್ರಾಮವು ನಿಜಕ್ಕೂ ಬಾವೈಕ್ಯತೆಯ ಪಾಠ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಕೂಡ ಅಷ್ಟೇ ಸತ್ಯಾಂಶವಾಗಿದೆ.

RELATED ARTICLES

Related Articles

TRENDING ARTICLES