ಬೆಂಗಳೂರು: ನಾಳೆಯಿಂದ ಹಿಂದುಗಳ ಪವಿತ್ರ ಯಾತ್ರೆ ಅಮರನಾಥಯಾತ್ರೆ ಶುರುವಾಗಲಿದೆ.ಯಾತ್ರೆಯ ಅವಧಿ ಈ ಬಾರಿ 62 ದಿನಗಳು ಇರಲಿದ್ದು,ಕೆಳದ ಬಾರಿಗಿಂತ ಶೇ.10ರಷ್ಟು ಹೆಚ್ಚು ಜನರು ಅಮರನಾಥಯಾತ್ರೆಯಲ್ಲಿ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ 2ನೇ ಆಷಾಢ ಶುಕ್ರವಾರದ ಸಂಭ್ರಮ : ತಾಯಿ ದರ್ಶನಕ್ಕೆ ಬಸ್ ಫ್ರೀ
ಅಮರನಾಥ ಯಾತ್ರೆಗೆ 3 ಲಕ್ಷ ಯಾತ್ರಿಗಳು ನೋಂದಣಿ
ಅಮರನಾಥ ಯಾತ್ರೆಗೆ 3 ಲಕ್ಷ ಯಾತ್ರಿಗಳು ನೋಂದಣಿ ಮಾಡಿಕೊಂಡು ಕಳೆದ ಬಾರಿಗಿಂತ ಶೇ.10ರಷ್ಟುಹೆಚ್ಚು ಜನರು ವಿವಿಧ ಮೂಲಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಯಾತ್ರಿಕರ ಪ್ರಯಾಣಕ್ಕೆ ಸುರಕ್ಷತಾ ಕ್ರಮ
ಯಾತ್ರಿಕರ ಮೊದಲ ತಂಡವು ಜೂ.30ರಂದು ಜಮ್ಮುವಿನಿಂದ ತೆರಳಲಿದೆ. ಯಾತ್ರೆಯುದ್ದಕ್ಕೂ ಜನರಿಗೆ ಅನುಕೂಲವಾಗಲು ಹಾದಿ ಸುಗಮಗೊಳಿಸಲಾಗಿದ್ದು, ಮಾರ್ಗದಲ್ಲಿ 5 ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ, ಹಿಡಿಕೆ ಕಂಬಿಗಳನ್ನು ಅಳವಡಿಸಲಾಗಿದೆ. ಅಂತರ್ಜಾಲ ಕಲ್ಪಿಸಲು ಎಲ್ಲ ಕಡೆ ಕೇಬಲ್ಗಳನ್ನು ಅಳವಡಿಸಲಾಗಿದೆ.
ಜನರ ಭದ್ರತೆ ಒತ್ತು
ಜನರ ಭದ್ರತೆಯ ಆದ್ಯ ಕರ್ತವ್ಯವಾಗಿರುವ ಕಾರಣ ಚಾರಣದುದ್ದಕ್ಕೂ ಭದ್ರತಾ ಸಿಬ್ಬಂದಿ, ಡ್ರೋನ್ಗಳನ್ನು ನಿಯೋಜನ ಮಾಡಲಾಗಿದೆ. ಇದನ್ನು ಜಮ್ಮು ಕಾಶ್ಮೀರ ಪೊಲೀಸ್ ಆಯುಕ್ತರು ಪರಿಶೀಲನೆ ನಡೆಸಿದ್ದಾರೆ ಎಂದು ಅಮರನಾಥ ಯಾತ್ರೆ ಮಂಡಳಿ ಮುಖ್ಯಸ್ಥ ಮಂದೀಪ್ ಕುಮಾರ್ ಬಂಢಾರಿ ತಿಳಿಸಿದರು.