Sunday, December 22, 2024

ಸ್ನೇಹಿತರ ಜೊತೆ ಸೇರಿ ಪತ್ನಿಗೆ ಲೈಂಗಿಕ ಕಿರುಕುಳ, ಅಣ್ಣ ತಮ್ಮಂದಿರ ಬಂಧನ

ಬೆಂಗಳೂರು : ಮದುವೆ ಮಾಡಿಕೊಂಡ ಗಂಡನ ಮಾದಕ ಮತ್ತಿಗೆ ಬೇಸತ್ತು ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮತ್ತೇರಿಸಿಕೊಂಡ್ರೆ ಓಕೆ. ಮತ್ತಿನಲ್ಲೇ ಮತ್ತೊಬ್ಬರ ಜೊತೆ ಸಹಕರಿಸು ಅನ್ನೋದು, ಹೊಡೆಯೋದು ಬಡೆಯೋದು ಮಾಡಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.

ಗಾಂಜಾ ಮತ್ತಲ್ಲಿ ಹೊಡೆಯೋದು ಬಡಿಯೋದು ಅಲ್ಲದೇ ಸ್ನೇಹಿತರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಅಂತ ಮಹಿಳೆಯೊಬ್ಬರು ಆರೋಪಿಸಿದ್ದಾಳೆ. ತನ್ನ ಪತಿ ಅಖಿಲೇಶ್ ಮತ್ತು ಆತನ ಸಹೋದರ ಅಭಿಲಾಶ್ ಹಾಗೂ ಸ್ನೇಹಿತರು ಸೇರಿ ಆರು ಜನರ ವಿರುದ್ಧ ಲೈಂಗಿಕ ಕಿರುಕುಳ ನೀಡಿದ್ದಾರೆ ಅಂತ ಸುಬ್ರಹ್ಮಣ್ಯಪುರ ಠಾಣೆಗೆ ದೂರು ನೀಡಿದ್ದು, ಅಣ್ಣ ತಮ್ಮಂದಿರನ್ನ ಪೊಲೀಸರು ಬಂಧಿಸಿದ್ದಾರೆ.

ಮ್ಯಾಟ್ರೋಮನಿಯಲ್ಲಿ ಪರಿಚಯ

ಇದು ಈಗಿನ ಸ್ಟೋರಿ ಅಲ್ಲ. ಎರಡು ವರ್ಷಗಳಿಂದಲೂ ನಡೆಯುತ್ತಿರುವ ಸ್ಟೋರಿ. ಮ್ಯಾಟ್ರೋಮನಿಯಲ್ಲಿ ಪರಿಚಯ ಆಗಿದ್ದ ಅಖಿಲೇಶ್ ಜೊತೆ 2019ರಲ್ಲಿ ಮಹಿಳೆ ಮದುವೆಯಾಗಿದ್ದಳು. ಇಬ್ಬರ ಫ್ಯಾಮಿಲಿ ಒಪ್ಪಿಯೇ ಮದುವೆಯಾಗಿತ್ತು. ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರಾರಂಭದಲ್ಲಿ ಜೀವನ ಚೆನ್ನಾಗೇ ನಡೆಯುತ್ತಿತ್ತು. ಆದ್ರೆ, ಕೆಲ ತಿಂಗಳ ನಂತರ ಪತಿ ಕಿರುಕುಳ ಶುರು ಮಾಡಿದ್ದಾನೆ.

ಇದನ್ನೂ ಓದಿ : Instagramನಲ್ಲಿ ಪರಿಚಯ, ಮದುವೆ ನೆಪದಲ್ಲಿ ಯುವತಿ ಮೇಲೆ 20 ದಿನ ಅತ್ಯಾಚಾರ

ಗಾಂಜಾ ಸೇವಿಸಿ ಲೈಂಗಿಕ ಕಿರುಕುಳ

ವರ್ಕ್ ಫ್ರಮ್ ಹೋಮ್ ವೇಳೆ ಆತನ ತಮ್ಮ ಅಭಿಲಾಶ್ ಮತ್ತು ಸ್ನೇಹಿತರ ಜೊತೆ ಸೇರಿ ಮನೆಯಲ್ಲೇ ಗಾಂಜಾ ಸೇವಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಸಂಬಂಧ 2022ರ ಅಕ್ಟೋಬರ್ ನಲ್ಲಿ ಸುಬ್ರಹ್ಮಣ್ಯಪುರ ಠಾಣೆಗೆ ಮಹಿಳೆ ದೂರು ನೀಡಿದ್ದರು. ಈ ಕೇಸ್ ಸಂಬಂಧ ಅಖಿಲೇಶ್ ಮತ್ತು ಅಭಿಲಾಶ್ ನನ್ನ ಪೊಲೀಸರು ಬಂಧಿಸಿದ್ದಾರೆ.

ಸದ್ಯ ಇಬ್ಬರನ್ನ ಅರೆಸ್ಟ್ ಮಾಡಿರುವ ಪೊಲೀಸರು ಉಳಿದ ನಾಲ್ವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದ್ರೆ ಕಳೆದ ವರ್ಷ ದಾಖಲಾಗಿದ್ದ ಕೇಸ್ ನಲ್ಲಿ ಪೊಲೀಸರು ಈಗ ಅರೆಸ್ಟ್ ಮಾಡಿದ್ದು ವಿಪರ್ಯಾಸವೇ ಸರಿ. ಇಷ್ಟು ದಿನ ಆಗಿದ್ರೂ ಲೈಂಗಿಕ ಕಿರುಕುಳ ಕೇಸ್ ನಲ್ಲಿ ಪೊಲೀಸರು ಲೇಟ್ ಮಾಡಿದ್ಯಾಕೆ ಅನ್ನೋ ಪ್ರಶ್ನೆಗೆ ಹಿರಿಯ ಅಧಿಕಾರಿಗಳೇ ಉತ್ತರ ಕೊಡಬೇಕು.

RELATED ARTICLES

Related Articles

TRENDING ARTICLES