ಹಾಸನ: ಬಡವರು ತಿನ್ನುವ ಪಡಿತರ ಅಕ್ಕಿಯಲ್ಲೂ ಕಲಬೆರಕಿ ಮಾಡಿರುವ ಅರೋಪ ಕೇಳಿಬಂದಿದೆ. ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಿತವಾಗಿದೆ ಎಂದು ಆರೋಪಿಸಲಾಗಿದೆ.
ಹೌದು, ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅಂಕಿಹಳ್ಳಿ ಪೇಟೆ ಗ್ರಾಮದ ಲಕ್ಕುಂದ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ.
ಗ್ರಾಮದ 20 ಕ್ಕೂ ಹೆಚ್ಚು ಮನೆಗಳಿಗೆ ನೀಡಿರೋ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಕಂಡು ಬಂದಿದೆ.
ಊಟ ಮಾಡೋದಕ್ಕೆ ಹಿಂದೇಟು ಹಾಕ್ತಿರೋ ಜನ
ಅಕ್ಕಿಯ ಕೆಲವೊಂದು ಕಾಳುಗಳು ಸಿಕ್ಕಿದ್ದು, ಅದು ನೀರಿನಲ್ಲಿ ತೇಲುತ್ತಿದೆ. ಅಲ್ಲದೆ ಅನ್ನ ಮಾಡಲು ಇಟ್ಟರೆ ಬೇಯದ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಬೆಂಕಿಯಲ್ಲಿ ಕಾಯಿಸಿ ಪರೀಕ್ಷೆ ಮಾಡ್ತಿರೋ ಜನ
ಲಕ್ಕುಂದ ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ್ದ ಅಕ್ಕಿಯನ್ನು ಕಾಯಿಸಿದ್ರೆ ಪ್ಲಾಸ್ಟಿಕ್ ಜಿನುಗೋ ಮಾದರಿಯಲ್ಲಿಯೇ ಜಿನುಗುತ್ತಿರೋ ಅಕ್ಕಿ ಪ್ಲಾಸ್ಟಿಕ್ ಮಾದರಿಯಲ್ಲಿರೋ ಅಕ್ಕಿಯನ್ನು ಕಂಡು ಕಳವಳ ವ್ಯಕ್ತಪಡಿಸಿದ್ದಾರೆ.