Monday, November 4, 2024

ನಾನ್ ವೆಜ್ ಪ್ರಿಯರಿಗೆ ಮತ್ತೊಂದು ಶಾಕ್! : ಚಿಕನ್-ಮೊಟ್ಟೆ ದರವೂ ಹೆಚ್ಚಳ

ಬೆಂಗಳೂರು : ತರಕಾರಿ ಹಾಗೂ ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಿದ್ದು, ಬೆಲೆ ಏರಿಕೆ ಬಿಸಿ ಜನರ ಕೈ ಸುಡುವಂತಾಗಿದೆ. ಈ ಮಧ್ಯೆ ನಾನ್​​​ ವೆಜ್​​​ ಪ್ರಿಯರಿಗೆ ಮತ್ತೊಂದು ಶಾಕ್​​​​ ಎದುರಾಗಿದೆ.

ಮೊಟ್ಟೆಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗತ್ತಿರೋದು ಮೊಟ್ಟೆ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮತ್ತೊಂದೆಡೆ ಚಿಕನ್ ದರ ಸಹ ಹೆಚ್ಚಾಗಿದೆ.

ಚಿಕನ್ ಬೆಲೆ ವಿಥ್ ಸ್ಕಿನ್​​​​ಗೆ ಕಿಲೋಗೆ 236 ರೂಪಾಯಿ ಹಾಗೂ ಚಿಕನ್ ವಿಥ್ ಔಟ್ ಸ್ಕಿನ್ ಕಿಲೋಗೆ 266 ರೂಪಾಯಿ ಆಗಿದೆ. ಜೊತೆಗೆ ಮಟನ್ ರೇಟ್ ಸಹ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ.

ಮೊಟ್ಟೆ ಬೆಲೆ 6 ರೂ.ನಿಂದ 7 ರೂ.

ಒಂದು ಮೊಟ್ಟೆ ಬೆಲೆ 6 ರೂಪಾಯಿಂದ 7 ರೂಪಾಯಿ ಆಗಿದೆ. ಬೇಸಿಗೆಯಾಗಿದ್ದರಿಂದ ಕೋಳಿಗಳು ಸಾಯುತ್ತಿವೆ. ಜೊತೆಗೆ ಆಂಧ್ರಪ್ರದೇಶಕ್ಕೆ ರಾಜ್ಯದಿಂದ ಹೆಚ್ಚು ರಫ್ತಾಗಿದೆ. ಹೀಗಾಗಿ, ಅಭಾವ ಉಂಟಾಗಿದೆ ಅಂತ ಹೇಳಲಾಗುತ್ತಿದೆ. ಹೀಗಾಗಿ, ಮೊಟ್ಟೆ, ಚಿಕನ್ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ ಅನ್ನೋದು ವ್ಯಾಪಾರಿಗಳ ಮಾತು.

ಇದನ್ನೂ ಓದಿ : ನಿಮಗೆ ಏನು ತಿಂದು ಅಭ್ಯಾಸ? ಅನ್ನವೋ, ಹಣವೊ? : ಶಾಸಕ ಯತ್ನಾಳ್

ಟೊಮೆಟೊ ಬೆಳೆದವರಿಗೆ ಅದೃಷ್ಟಲಕ್ಷ್ಮೀ

ದರ ಕುಸಿದಾಗ ರೈತರು ಟೊಮೆಟೊಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ಮಾಡುತ್ತಿದ್ದರು. ಈಗ ಟೊಮೆಟೊ ಬೆಳೆದ ರೈತರಿಗೆ ಅದೃಷ್ಟಲಕ್ಷ್ಮೀ ಒಲಿದು ಬಂದಂತಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 90 ರಿಂದ 130 ರೂಪಾಯಿಗೆ ಟೊಮೆಟೊ ದರ ಜಿಗಿದಿದೆ.

ನಾಟಿ ಮತ್ತು ಫಾರಂ ಹಣ್ಣು ಬಹುತೇಕ ಕಡೆ ಕಿಲೋಗೆ 90ರಿಂದ 120 ರೂಪಾಯಿ ಇದೆ. ಸಣ್ಣಪುಟ್ಟ ಆಂಗಡಿಗಳಲ್ಲಿ ಇದರ ಬೆಲೆ ಸುಮಾರು10 ರೂಪಾಯಿಗಳಷ್ಟು ಹೆಚ್ಚಾಗಿದೆ. ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗುತ್ತಿರುವ ಕಾರಣ ಟೊಮೆಟೊ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

RELATED ARTICLES

Related Articles

TRENDING ARTICLES