Friday, May 17, 2024

ಬಕ್ರೀದ್ ಆಚರಣೆಗೆ ಅಡ್ಡಿ ಆರೋಪ, ಭಿಕ್ಷುಕನಿಗೆ ಥಳಿತ

ಹುಬ್ಬಳ್ಳಿ : ಬಕ್ರೀದ್ ಹಬ್ಬದ ಆಚರಣೆಗೆ ಅಡ್ಡಿಪಡಿಸಿದ ಆರೋಪ ಹಿನ್ನೆಲೆ ಭಿಕ್ಷುಕನಿಗೆ ಥಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ ಚೆನ್ನಮ್ಮ ವೃತ್ತದಲ್ಲಿ ಈ ಘಟನೆ ನಡೆದಿದೆ. ಬಕ್ರೀದ್ ಹಬ್ಬದ ಆಚರಣೆಗೆ ಭಿಕ್ಷುಕ ಅಡ್ಡಿಪಡಿಸಿದ್ದಾನೆ ಎಂದು ಕುಪಿತಗೊಂಡ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ.

ಬಕ್ರೀದ್ ಹಿನ್ನೆಲೆ ನಗರದ ಈದ್ಗಾ ಮೈದಾನ ಹಾಗೂ ಸುತ್ತಮುತ್ತಲೂ ಸಾಮೂಹಿಕ ಪ್ರಾರ್ಥನೆ ನಡೆಯಿತು. ಪ್ರಾರ್ಥನೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಈ ವೇಳೆ ಭಿಕ್ಷುಕನೊಬ್ಬ ಪ್ರಾರ್ಥನೆಗೆ ಅಡ್ಡಿ ಪಡಿಸಿದ್ದಾನೆ. ಹೀಗಾಗಿ, ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಭಿಕ್ಷುಕನಿಗೆ ಥಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ : ಬಕ್ರೀದ್​​ಗೆ​ ಶುಭಕೋರಿದ ರಾಷ್ಟ್ರಪತಿ, ಪ್ರಧಾನಿ

ಬೀದರ್‌ನಲ್ಲಿ ಬಕ್ರೀದ್ ಆಚರಣೆ

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಬೀದರ್‌ ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್ ಆಚರಣೆ ನಡೆಯಿತು. ಸಾವಿರಾರು ಮುಸ್ಲಿಂ ಬಾಂಧವವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಬಳಿಕ ಪರಸ್ಪರ ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಈದ್ಗಾ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ವಿಶ್ವದೆಲ್ಲೆಡೆ ಇಂದು ಬಕ್ರೀದ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಸ್ಲಿಮರು ಬಕ್ರೀದ್‌ ಶುಭಾಶಯಗಳನ್ನು ಹಂಚಿಕೊಂಡು ಆಚರಣೆಯಲ್ಲಿ ತೊಡಗಿದರು. ಬಕ್ರೀದ್‌ ಬಲಿದಾನದ ಹಬ್ಬವನ್ನಾಗಿ ಆಚರಣೆ ಮಾಡಲಾಗುತ್ತದೆ.

RELATED ARTICLES

Related Articles

TRENDING ARTICLES