ರಾಮನಗರ : ನಾನು ಲಂಚ ಮುಟ್ಟಲ್ಲ, ನೀವು ಮುಟ್ಟಬೇಡಿ ಎಂದಿದ್ದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ರಾಮನಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಲಂಚ ಮುಟ್ಟಲ್ಲ, ನೀವು ಮುಟ್ಟಬೇಡಿ ಅಂತ ವೀರಾವೇಶದಲ್ಲಿ ಹೇಳ್ತಾರೆ. ಆದರೆ, ಬೆಳಗ್ಗೆ ಎದ್ರೆ ಕಾಂಗ್ರೆಸ್ ನಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ನವರು ಹೊರನೋಟಕ್ಕೆ ನಾವು ಲಂಚ ತೆಗೆದುಕೊಳ್ಳಲ್ಲ ಅಂತಾರೆ. ಕಾಂಗ್ರೆಸ್ ನವರು ವರ್ಗಾವಣೆ ಬಿಟ್ರೆ ಬೇರೇನೂ ಕೆಲಸ ಮಾಡ್ತಿಲ್ಲ. ಪ್ರತಿಯೊಂದು ಇಲಾಖೆಯ ಅಧಿಕಾರಿಗಳನ್ನು ಬಿಜೆಪಿಗಿಂತ ಕೆಟ್ಟ ರೀತಿ ನಡೆಸಿಕೊಳ್ತಿದ್ದಾರೆ ಎಂದು ಡಿಕೆಶಿ ಹೆಸರೇಳದೆ ಛೇಡಿಸಿದ್ದಾರೆ.
ಇದನ್ನೂ ಓದಿ : ಸುಳ್ಳು ಸುದ್ದಿ ಹಬ್ಬಿಸಿದ್ರೆ ಕಾನೂನು ಕ್ರಮ : ಸಚಿವ ಡಾ.ಜಿ.ಪರಮೇಶ್ವರ್
ಮಂತ್ರಿಗಳಿಗೆ ಪಾಠ ಮಾಡಬೇಕು
ಅಧಿಕಾರ ಬಂದಾಗ ತಲೆತಿರುಗದೆ ಗೌರವಯುತವಾಗಿ ಕೆಲಸ ಮಾಡಬೇಕು. ಜನಪ್ರತಿನಿಧಿಗಳು ಮೊದಲ ಸಾರ್ವಜನಿಕವಾಗಿ ಯಾವ ರೀತಿ ನಡೆದುಕೊಳ್ಳಬೇಕು ಅಂತ ಕಲಿಯಬೇಕು. ಸ್ಪೀಕರ್ ಅವ್ರು ಹೊಸ ಶಾಸಕರಿಗೆ ಮೂರು ದಿನ ಪಾಠ ಮಾಡಿದ್ರು. ಅದರ ಬದಲು ಮಂತ್ರಿಗಳು ಯಾವ ರೀತಿ ಇರಬೇಕು ಅಂತ ಪಾಠ ಮಾಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಇದು ನಗೆಪಾಟಲಿನ ವಿಚಾರ
ಕಾಂಗ್ರೆಸ್ ನಲ್ಲೂ ಈಗ ಪರ್ಸೆಂಟೇಜ್ ಶುರುವಾಗುತ್ತೆ. ಅದರಲ್ಲಿ ಯಾವುದೇ ಅನುಮಾನ ಬೇಡ. ರೇಟ್ ಫಿಕ್ಸ್ ಮಾಡುವ ಸಲುವಾಗಿ ಎಲ್ಲಾ ಕೆಲಸ ನಿಲ್ಲಿಸಿದ್ದಾರೆ. ಕಳೆದ 4 ವರ್ಷದ ಬೆಂಗಳೂರು ಅಭಿವೃದ್ಧಿ ಬಗ್ಗೆ ತನಿಖೆ ಮಾಡ್ತೀವಿ ಅಂತ ಒಬ್ಬ ಮಂತ್ರಿ ಹೇಳ್ತಾರೆ. ಇದು ನಗೆಪಾಟಲಿನ ವಿಚಾರ ಎಂದು ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.