ಬೆಂಗಳೂರು : ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಆಗದೆ ಇದ್ದರೆ ರಾಜ್ಯದ ಜನೆತೆಗೆ ಕ್ಷಮೆ ಕೇಳಿ, ಇಲ್ಲವಾದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದು ರಾಜ್ಯ ಸರ್ಕಾರದ ವಿರುದ್ದ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಈ ಸರ್ಕಾರದಲ್ಲಿ ಒಂದೇ ಅಧಿಕಾರಿಯ ವರ್ಗಾವಣೆಗೆ 4 ಬಾರಿ ಲೆಟರ್ ಕೊಟ್ಟಿದ್ದಾರೆ ಅಲ್ಲದೆ ಲೋಕಾಯುಕ್ತವನ್ನು ಮುಚ್ಚಿಸಿದ್ದು ಸಿದ್ದರಾಮಯ್ಯ ಎಂದು ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಇವರ ನಡವಳಿಕೆ ನೋಡಿದರೆ ಮತ್ತೆ ಎಸಿಬಿ ಮುನ್ನೆಲೆಗೆ ತರಬಹುದೆಂದ ಅವರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಫ್ರೀ ಯೋಜನೆ ಘೋಷಿಸಿ ಅಧಿಕಾರಕ್ಕೇರಿದ್ದಾರೆ ಎಂದು ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ : ಮಾರ್ಕೆಟ್ ನಲ್ಲಿ ಕೆಜಿ ಅಕ್ಕಿಗೆ 60 ರೂ. ಇದೆ, ನೀವು 34 ರೂ. ಅಂತೀರಿ :…
ನುಡಿದಂತೆ ನಡೆಯಿರಿ ಇಲ್ಲವಾದರೆ ಬೀದಿಗಿಳಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು. ಅಂದು ವಿಧಾನಸೌಧಕ್ಕೆ ಕಿವಿ ಮೇಲೆ ಹೂವನ್ನು ಇಟ್ಟು ಬಂದಿದ್ದರು ಈಗ ನಾವು ನಿಮ್ಮ ಕಿವಿ ಮೇಲೆ ಹೂ ಇಟ್ಟಿದ್ದೇವೆ ಎಂದು ಹೇಳಿ ಎಂದ ವಿಜಯೇಂದ್ರ ಈ ಸರ್ಕಾರದಲ್ಲಿ ಕೆಲವು ಯುವ ಸಚಿವರ ಹೇಳಿಕೆಗಳನ್ನು ನೋಡಿದರೆ ಅವರೇ ಸಿಎಂ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.