Saturday, November 2, 2024

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಅಪಘಾತ : ತಪ್ಪಿದ ಭಾರೀ ಅನಾಹುತ

ರಾಮನಗರ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ದಶಪಥ ಹೆದ್ದಾರಿಯಲ್ಲಿ ಇಂದು ಮತ್ತೊಂದು ಅಪಘಾತ ಸಂಭವಿಸಿ ಅದೃಷ್ಟವಶಾತ್ ದೊಡ್ಡ ಅನಾಹುತದಿಂದ ಪ್ರಯಾಣಿಕರು ಪಾರಾಗಿದ್ದಾರೆ.

ಮೈಸೂರು ಕಡೆಯಿಂದ ಪ್ಲೈವುಡ್ ತುಂಬಿದ್ದ ಬೊಲೆರೋ ವಾಹನ ಬೆಂಗಳೂರು ಕಡೆಗೆ ಹೊರಟಿತ್ತು. ರಾಮನಗರ ತಾಲ್ಲೂಕಿನ ವಿಜಯಪುರ ಬಳಿ ಹೋಗುವಾಗ ಬುಲೋರೊ ವಾಹನದ ಟೈರ್ ಬಸ್ಟ್ ಆದ ಹಿನ್ನೆಲೆ ವಾಹನದಲ್ಲಿ ತುಂಬಿದ್ದ ಪ್ಲೈವುಡ್ ಶೀಟ್ ಗಳು ಹಿಂಬದಿ ಬರ್ತಿದ್ದ ಬಸ್ ನಾ ಗ್ಲಾಸ್ ಗೆ ತಾಗಿವೆ.

ಹಿಂಬದಿಯಿಂದ ಬಂದ್ ಬಸ್ ನೇರವಾಗಿ ಬುಲೋರೊ ವಾಹನಕ್ಕೆ ಡಿಕ್ಕಿ ಹೊಡೆದು ಸರ್ವಿಸ್ ರಸ್ತೆ ಮುಖಾಂತರ ಪಕ್ಕದ ಜಮೀನಿಗೆ ನುಗ್ಗಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲಿಯೇ ಕೆಎಸ್ಆರ್ ಟಿಸಿ ಕಂಡಕ್ಟರ್ ಸಾವನ್ನಪ್ಪಿದ್ದು, ಬಸ್ ಚಾಲಕನಿಗೆ ಕೈ ಕಟ್ ಆಗಿದೆ. ಅಲ್ಲದೆ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : ಆಗಸ್ಟ್ ತಿಂಗಳಲ್ಲಿ ಮಹಿಳೆಯರ ಅಕೌಂಟಿಗೆ ಹಣ ಹಾಕ್ತೇವೆ : ಸಚಿವೆ ಹೆಬ್ಬಾಳ್ಕರ್

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಾಮನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಸ್ವಲ್ಪ ಯಾಮಾರಿದ್ರೂ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ರಕ್ತದೋಕುಳಿಯೇ ಹರಿಯುತ್ತಿತ್ತು.

RELATED ARTICLES

Related Articles

TRENDING ARTICLES