Wednesday, January 22, 2025

ಮದುವೆ ಮನೆಯಲ್ಲಿ ಸೂತಕದ ಛಾಯೆ: ಕಣ್ಣೀರಿನಲ್ಲಿ ಕುಟುಂಬ

ಶಿವಮೊಗ್ಗ: ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಮೂಡಿ ಸಡಗರದಲ್ಲಿರಬೇಕಾಗಿದ್ದ ಕುಟುಂಬ ಕಣ್ಣೀರಿನಲ್ಲಿರಬೇಕಾದ ಮನಕಲಕುವ ಘಟನೆ ಸಂಭವಿಸಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಗ್ರಾಮದಲ್ಲಿಯ ಇಬ್ಬರು ಹೆಣ್ಣು ಮಕ್ಕಳ ಮದುವೆಯೂ ಅವರ ತಂದೆಯ ಸಾವಿನಿಂದ ರದ್ದಾಗಿದೆ. ಆನಂದಪುರದ ನಿವಾಸಿ ಮಂಜುನಾಥ ಗೌಡ ಎಂಬುವವರು ತಮ್ಮ ಮನೆಯಿಂದ ಕೆಲವೇ ದೂರ ಅಂತರದಲ್ಲಿರುವ ರಸ್ತೆಯನ್ನು ದಾಟುವ ವೇಳೆಯಲ್ಲಿ ಚೆನ್ನಕೊಪ್ಪದ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದರು.

 ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ

ಡಿಕ್ಕಿಯ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ನೋವು ತಾಳಲಾರದೆ ದುರಾದೃಷ್ಟವಶಾತ್ ಮಂಜುನಾಥ ಗೌಡ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ತನ್ನ ಇಬ್ಬರು ವಧುಗಳ ಮದುವೆಗಾಗಿ ಮಾವನ ಮನೆಗೆಂದು ಕೆಂಜಗಾಪುರ ಗ್ರಾಮಕ್ಕೆ ಮಂಜುನಾಥ ಗೌಡ ಆಗಮಿಸಿದ್ದರು.

ಇಂದು ತನ್ನ ಮಕ್ಕಳ ಮದುವೆಯನ್ನು ನೆರವೇರಿಸುವುದಕ್ಕಾಗಿ ಸಮೀಪದ ಕೆಂಜಗಾಪುರ  ಗ್ರಾಮದಲ್ಲಿ ಮಂಜುನಾಥ ಗೌಡ ಸಂಪೂರ್ಣ ಸಿದ್ದತೆಯನ್ನು ಮಾಡಿಕೊಂಡಿದ್ದ,ಸೋಜಿಗದ ಸನ್ನಿವೇಶವೆಂದರೆ ಕಳೆದ 3 ವರ್ಷಗಳ ಹಿಂದೆ ತನ್ನ ಹೆಂಡತಿಯನ್ನು ಸಹ ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದ ಮಂಜುನಾಥ ಗೌಡ ಈಗ ಹೆತ್ತ ಮಕ್ಕಳ ಮದುವೆಯಲ್ಲಿ ಭಾಗಿಯಾಗಲಾರದೆ ಇಹಲೋಕ ತ್ಯಜಿಸಿದ್ದು, ಹೆಣ್ಣು ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಈ ಘಟನೆಯ ಕುರಿತು ಆನಂದಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES