ವಿಜಯಪುರ : ಯತ್ನಾಳ್ ಗೆ ತಲೆಯಲ್ಲಿ ಕೋಡು ಬಂದಿವೆ. ನಾನೊಬ್ಬನೆ ಗೆದ್ದಿದ್ದೀನಿ ಎನ್ನುವ ಧಿಮಾಕು, ಅಹಂ ಬಂದಿದೆ ಎಂದ ಮಾಜಿ ಸಚಿವ ಮುರುಗೇಶ ನಿರಾಣಿ ವಾಗ್ದಾಳಿ ನಡೆಸಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಯತ್ನಾಳ್ ಬೆಂಬಲಿಗರಿಂದ ಗಲಾಟೆ ವಿಚಾರ ಮಾಧ್ಯಮಗಳ ಎದುರು ಆಕ್ರೋಶ ಹೊರಹಾಕಿದರು.
ಯತ್ನಾಳ್ ಧಿಮಾಕಿನ ಮಾತು ಇನ್ನುಮುಂದೆ ನಡೆಯುವುದಿಲ್ಲ. ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ. ಮತ್ತೊಬ್ಬರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು. 2018ರಲ್ಲಿ ಕಾರಜೋಳರ ಪುತ್ರನನ್ನ ಸೋಲಿಸಿದ್ದು ಯಾರು? ವಿಜುಗೌಡ ಪಾಟೀಲ್ ಮೂರು ಬಾರಿ ಸೋತಿದ್ದಾರೆ, ಅವರನ್ನ ಸೋಲಿಸುವ ಪ್ರಯತ್ನ ಯಾರು ಮಾಡಿದ್ದಾರೆ? ಎಂದು ಹರಿಹಾಯ್ದರು.
ಇದನ್ನೂ ಓದಿ : ಹಿಂದು ಆಗಿ ಹಿಂದೂಗಳ ವಿರುದ್ಧ ನಿಲ್ಲುವವರೇ ಹಿಜಡಾಗಳು : ಶಾಸಕ ಯತ್ನಾಳ್
ಟೋಪಿ ಹಾಕಿ ನಮಾಜ್ ಮಾಡಿದ್ದು ಯಾರು?
ನಾನೇ ಹಿಂದೂ ಹುಲಿ.. ನಾನೇ ಹಿಂದೂ ಹುಲಿ ಎಂದು ಜಂಬ ಕೊಚ್ಚಿಕೊಂಡವರು, ಪಾರ್ಟಿ ಬಿಟ್ಟು ಹೋಗಿ ಟೋಪಿ ಹಾಕಿ ನಮಾಜ್ ಮಾಡಿದ್ದಾರೆ. ಇದನ್ನು ವಿಜಯಪುರದ ಜನ ಮರೆತಿಲ್ಲ. ಮಾತನಾಡೋದು ಬಹಳ ಇದೆ. ಮಾಳಿಗೆ ಏರಿದ ಮೇಲೆ ಏಣಿ ಒದ್ದರು ಅನ್ನೋ ಹಾಗೆ ಆಗಬಾರದು ಎಂದು ಕಿಡಿಕಾರಿದರು.
ಇಲ್ಲಿಗೆ ಚುನಾವಣೆ ಮುಗಿದಿಲ್ಲ, ನಾವಷ್ಟೆ ಸೋತಿಲ್ಲ. ವಾಜಪೇಯಿಯವರು ಸೋತಿದ್ದಾರೆ. ವಿಜಯಪುರದಲ್ಲಿ ಬಿಜೆಪಿ ತಲೆತಗ್ಗಿಸೋ ಹಾಗೆ ಮಾಡ್ತಿದ್ದಾನೆ ಎಂದು ಯತ್ನಾಳ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.