Monday, December 23, 2024

ಬೈಕ್‌ಗೆ ಲಾರಿ ಡಿಕ್ಕಿ ಇಬ್ಬರು ಸಾವು

ಮೈಸೂರು: ಲಾರಿ ಹರಿದು ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ
ನಂಜನಗೂಡು ತಾಲೂಕಿನ ಕಳಲೆ ಗೇಟ್ ಬಳಿ ನಡೆದಿದೆ.

ಬೈಕ್ ನಲ್ಲಿ ಸ್ವಗ್ರಾಮಕ್ಕೆ ತೆರಳುವ ವೇಳೆ ಲಾರಿ ಹರಿದು ಸ್ಥಳದಲ್ಲೇ ಕಳಲೆ ಗ್ರಾಮದ ಶಿವರಾಜ್ (50), ಪಿ.ಮಹೇಶ್ (33) ಮೃತಪಟ್ಟಿದ್ದಾರೆ.

ನಂಜನಗೂಡು- ಗುಂಡ್ಲುಪೇಟೆ ಹೆದ್ದಾರಿಯಲ್ಲಿ ಕೇರಳ ಕಡೆಗೆ ತೆರಳುತ್ತಿದ್ದ ಸರಕು ಸಾಗಣೆ ಲಾರಿ ಮುಂದೆ ಚಲಿಸುತ್ತಿದ್ದ ವಾಹನ ನಿಧಾನ ಮಾಡಿದ ಪರಿಣಾಮ, ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಸಂಪೂರ್ಣವಾಗಿ ಬಲಭಾಗಕ್ಕೆ ಅತಿ ವೇಗವಾಗಿ ಚಲಾಸಿದ್ದರಿಂದ ಎರಡು ಬೈಕ್‌ಗಳಿಗೆ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಒಂದು ಬೈಕ್‌ನಲ್ಲಿದ್ದ ಶಿವರಾಜು ಹಾಗೂ ಟಿ.ಮಹೇಶ್ ತಲೆ ಮೇಲೆ ಲಾರಿ ಹಿಂಬದಿ ಚಕ್ರಗಳು ಹರಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್‌ನಲ್ಲಿದ್ದ ಮಹದೇವು ಹಾಗೂ ಅವರ ತಾಯಿ ಚಿಕ್ಕದೇವಮ್ಮ ಗಂಭೀರವಾಗಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಸಂಚಾರ ವಿಭಾಗದ ಪೊಲೀಸರು ಭೇಟಿ  ಪರಿಶೀಲಿಸಿ, ಅಪಘಾತಕ್ಕೆ ಕಾರಣವಾದ ಲಾರಿಯನ್ನು ಪೊಲೀಸರು ವಂಶಕ್ಕೆ ಪಡೆದಿದ್ದಾರೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

RELATED ARTICLES

Related Articles

TRENDING ARTICLES