Wednesday, January 22, 2025

ಅನ್ಯಾಯ! : ಸರ್ಫರಾಝ್ ಖಾನ್​ಗೆ ತೆರೆಯದ ಟೀಂ ಇಂಡಿಯಾ ಬಾಗಿಲು

ಬೆಂಗಳೂರು : ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ರನ್ ಗಳ ಸುರಿಮಳೆಗೈದಿರುವ ಯುವ ಬ್ಯಾಟ್ ಸರ್ಫರಾಝ್​ ಖಾನ್​ಗೆ ಟೀಂ ಇಂಡಿಯಾದ ಬಾಗಿಲು ಇನ್ನೂ ತೆರೆದಿಲ್ಲ.

ವಿಂಡೀಸ್ ವಿರುದ್ಧದ ಏಕದಿನ ಹಾಗೂ ಟೆಸ್ಟ್ ಸರಣಿಗಾಗಿ ಬಿಸಿಸಿಐ ಭಾರತ ತಂಡವನ್ನು ಆಯ್ಕೆ ಮಾಡಿದೆ. ಈ ಬಾರಿ ಹೆಚ್ಚು ಯುವಕರಿಗೆ ಮಣೆ ಹಾಕಲಾಗಿದೆ. ಆದರೆ, ದೇಶಿ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸರ್ಫರಾಝ್ ಖಾನ್ ಆಯ್ಕೆ ಸಮಿತಿ ಸದಸ್ಯರ ಕಣ್ಣಿಗೆ ಬಿದ್ದಿಲ್ಲ.

ಟೆಸ್ಟ್ ಸರಣಿಗೆ ಆಯ್ಕೆಯಾದ 16 ಸದಸ್ಯರ ಈ ಬಳಗದಲ್ಲಿ ಐಪಿಎಲ್ ಟೂರ್ನಿಯಲ್ಲಿ ಮಿಂಚಿರುವ ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಹಾಗೂ ಯಶಸ್ವಿ ಜೈಸ್ವಾಲ್​ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಸರ್ಫರಾಝ್​ ಖಾನ್ ಅವರನ್ನು ಕೈ ಬಿಟ್ಟು ರುತುರಾಜ್ ಗಾಯಕ್ವಾಡ್ ಗೆ ಮಣೆ ಹಾಕಿರುವುದಕ್ಕೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

ಭಾರತ ತಂಡದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸರ್ಫರಾಝ್ ಖಾನ್ ಅವರಂತಹ ಪ್ರತಿಭೆಗಳನ್ನು ಗುರುತಿಸುವಲ್ಲಿ ಆಯ್ಕೆಗಾರರು ವಿಫಲವಾದರೆ, ರಣಜಿ ಟ್ರೋಫಿ ಆಡುವ ಅಗತ್ಯವಿಲ್ಲ. ತಂಡದಲ್ಲಿ ಅವಕಾಶ ಸಿಗಲು ಐಪಿಎಲ್ ಆಡಿದ್ರೆ ಸಾಕು ಎನ್ನುವಂತಾಗಿದೆ. ಹೀಗಾದ್ರೆ ಸರ್ಫರಾಝ್ ಖಾನ್​ನಂತಹ ಯುವ ಪ್ರತಿಭೆಗಳ ಭವಿಷ್ಯವೇನು? ಅಂತ ಕಳವಳ ವ್ಯಕ್ತಪಡಿಸಿದ್ದಾರೆ.

ಋತುಗಿಂತ ಸರ್ಫರಾಝ್​ ಬೆಸ್ಟ್

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಋತುರಾಜ್ ಗಾಯಕ್ವಾಡ್ ​ಗಿಂತ ಸರ್ಫರಾಝ್​ ಖಾನ್ ಬೊಂಬಾಟ್ ಪ್ರದರ್ಶನ ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ರನ್​ ರಾಶಿ ಗುಡ್ಡೆ ಹಾಕಿದರೂ ಸರ್ಫರಾಝ್ ಗೆ ಭಾರತ ತಂಡದಲ್ಲಿ ಸ್ಥಾನ ನೀಡಿಲ್ಲ. ಋತುರಾಜ್ ಗಾಯಕ್ವಾಡ್ ಆಯ್ಕೆ ಅಚ್ಚರಿ ಮೂಡಿಸಿದೆ.

13 ಶತಕ ಹಾಗೂ 9 ಅರ್ಧಶತಕ

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಸರ್ಫರಾಝ್ ಖಾನ್ ಈವರೆಗೆ 37 ಪಂದ್ಯಗಳಲ್ಲಿ 54 ಇನಿಂಗ್ಸ್ ಆಡಿದ್ದಾರೆ. 79.65 ರ ಸರಾಸರಿಯಲ್ಲಿ 3,505 ರನ್ ಕಲೆಹಾಕಿದ್ದಾರೆ. ಇದರಲ್ಲಿ ತ್ರಿಶತಕ ಸೇರಿದಂತೆ 13 ಶತಕ ಹಾಗೂ 9 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಮತ್ತೊಂದೆಡೆ, ರುತುರಾಜ್ ಗಾಯಕ್ವಾಡ್ ಈವರೆಗೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 28 ಪಂದ್ಯಗಳಲ್ಲಿ 47 ಇನಿಂಗ್ಸ್​ ಆಡಿದ್ದಾರೆ. 42.19 ರ ಸರಾಸರಿಯಲ್ಲಿ ಋತುರಾಜ್ 1,941 ರನ್​ ಗಳಿಸಿದ್ದಾರೆ. ಇದರಲ್ಲಿ 6 ಶತಕ ಹಾಗೂ 9 ಅರ್ಧಶತಕ ಸೇರಿವೆ. ಈ ಅಂಕಿಅಂಶಗಳೇ ಸುನಿಲ್ ಗವಾಸ್ಕರ್ ಆಕ್ರೋಶಕ್ಕೆ ಕಾರಣವಾಗಿದೆ.

ಭಾರತ ಟೆಸ್ಟ್​ ತಂಡ

ರೋಹಿತ್​ ಶರ್ಮ(ನಾಯಕ), ಅಜಿಂಕ್ಯ ರಹಾನೆ(ಉಪನಾಯಕ), ಶುಭಮನ್ ಗಿಲ್, ವಿರಾಟ್​ ಕೊಹ್ಲಿ, ಋತುರಾಜ್​ ಗಾಯಕ್ವಾಡ್​, ಯಶಸ್ವಿ ಜೈಸ್ವಾಲ್​, ಕೆಎಸ್​ ಭರತ್​(ವಿ.ಕೀ), ಇಶಾನ್​ ಕಿಶನ್(ವಿ.ಕೀ), ಆರ್​. ಅಶ್ವಿನ್​, ರವೀಂದ್ರ ಜಡೇಜಾ, ಶಾರ್ದೂಲ್​ ಠಾಕೂರ್​, ಅಕ್ಷರ್​ ಪಟೇಲ್​, ಮೊಹಮದ್​ ಸಿರಾಜ್, ಮುಕೇಶ್​ ಕುಮಾರ್​, ಜೈದೇವ್​ ಉನಾದ್ಕತ್​, ನವದೀಪ್​ ಸೈನಿ

RELATED ARTICLES

Related Articles

TRENDING ARTICLES