Wednesday, January 22, 2025

KSFC ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂ.ವರೆಗೆ ಸಾಲ : ಸತೀಶ್ ಜಾರಕಿಹೊಳಿ

ತುಮಕೂರು : ರಾಜ್ಯ ಸರ್ಕಾರವು ಕೆ.ಎಸ್.ಎಫ್.ಸಿ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಗುಬ್ಬಿ ತಾಲ್ಲೂಕಿನ ನಾರನಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮವೊಮದರಲ್ಲಿ ಮಾತನಾಡಿ, ಬ್ಯಾಂಕ್ ಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡು ವ್ಯವಹಾರ ಯೋಜನೆಯನ್ನು ತಯಾರಿಸಿ ಕೊಡಿ. ಅದು ಸಮಂಜಸವಾಗಿದ್ದರೆ ಬ್ಯಾಂಕುಗಳು ಸಾಲ ಸೌಲಭ್ಯವನ್ನು ಒದಗಿಸುವಲ್ಲಿ ಮುಂದಾಗುತ್ತವೆ ಎಂದು ತಿಳಿಸಿದರು.

ಮೀಸಲಾತಿ ನೀಡುವಲ್ಲಿ ಇರುವ ಸರ್ಕಾರವೆಂದರೆ ಸಿದ್ದರಾಮಯ್ಯನವರ ಸರ್ಕಾರ. ವಿಶೇಷವಾಗಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡುವ ಯೋಜನೆಗಳನ್ನು ಸರ್ಕಾರ ತರುತ್ತದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ಮುಖ್ಯ ವಾಹಿನಿಯಲ್ಲಿ ಬರುವಲ್ಲಿ ಮುಂದಾಗಬೇಕು. ಶಿಕ್ಷಣ ಪಡೆದರೆ ಬುದ್ಧ, ಬಸವ, ಅಂಬೇಡ್ಕರ್, ಜಗಜೀವನ್ ರಾಮ್ ಅವರ ಚರಿತ್ರೆಯನ್ನು ತಿಳಿಯಲು ಅನುಕೂಲವಾಗುತ್ತದೆ ಎಂದು ನುಡಿದರು.

ಇದನ್ನೂ ಓದಿ : ಪ್ರಧಾನಿ ಮೋದಿಗೆ ‘ಆರ್ಡರ್ ಆಫ್ ದಿ ನೈಲ್’ ಗೌರವ

ಸ್ವಯಂ ಉದ್ಯೋಗ ಮಾಡಬೇಕು

ಯುವಜನರು ಸ್ವಯಂ ಉದ್ಯೋಗ ಮಾಡಬೇಕು. ಆಮೂಲಕ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳುವುದರ ಜೊತೆಗೆ ನಾಲ್ಕಾರು ಜನರಿಗೆ ಉದ್ಯೋಗ ನೀಡುವಲ್ಲಿ ಮುಂದಾಗಬೇಕು ಎಂದು ಸತೀಶ್ ಜಾರಕಿಹೊಳಿ ಸಲಹೆ ನೀಡಿದರು.

ಇಕೋ ಫ್ರೆಂಡ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕ ಪರಿಸರ ಸಂರಕ್ಷಣೆಯಾಗುತ್ತದೆ. ಆದಿಜಾಂಬವ ಬ್ರಿಗೇಡ್ ವತಿಯಿಂದ ತರಬೇತಿ ಪಡೆದು ಸ್ವಯಂ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಸ್ವತಃ ಉದ್ದಿಮೆ ಪ್ರಾರಂಭಿಸಿ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗುವ ನಿಟ್ಟಿನಲ್ಲಿ ಆದಿಜಾಂಬವ ಜನಾಂಗ ಮುಂದೆ ಬರಬೇಕು ಎಂದು ಹೇಳಿದರು.

RELATED ARTICLES

Related Articles

TRENDING ARTICLES