Sunday, December 22, 2024

ನಾನು ಸನ್ಯಾಸಿ ಅಲ್ಲ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ; ವಿ. ಸೋಮಣ್ಣ

ಬೆಂಗಳೂರು: ನಾನು ಸನ್ಯಾಸಿ ಅಲ್ಲ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ವಿ.ಸೋಮಣ್ಣ ಹೇಳಿದ್ದಾರೆ.

ನಗರದ ಬಿಜೆಪಿ (BJP) ಕಚೇರಿಯಲ್ಲಿ ಮಾತಾಡಿದ ಅವರು ನಾನು ಸನ್ಯಾಸಿ ಅಲ್ಲ ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಪಕ್ಷ ಏನು ತೀರ್ಮಾನ ಮಾಡುತ್ತದೆ ಎಂದು ನೋಡಬೇಕು. ನಾನು ಪಕ್ಷ ಹೇಳಿದ ಕೆಲಸ ಮಾಡಿದ್ದೇನೆ. ಎಂಥಹ ಸಂದರ್ಭದಲ್ಲೂ ವಿಚಲಿತನಾಗಿಲ್ಲ. ಪಕ್ಷ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಪತ್ನಿಯ ಪ್ರಿಯಕರನ ಕತ್ತು ಸೀಳಿ ರಕ್ತ ಕುಡಿದ ಪತಿರಾಯ

ಪಕ್ಷ ಕೊಟ್ಟಿರುವ ಟಾಸ್ಕ್‌ಗಳನ್ನು ನಾನು ಮಾಡಿದ್ದೇನೆ

ನಾನು ಇಲ್ಲಿಯವರಿಗೂ ಪಕ್ಷ ಕೊಟ್ಟಿರುವ ಎಲ್ಲಾ ಟಾಸ್ಕ್‌ಗಳನ್ನು ತಲೆ ಮೇಲೆ ಹೊತ್ತು ಮಾಡಿದ್ದೇನೆ. ಇಲ್ಲಿಯವರೆಗೂ 12 ಚುನಾವಣೆಗಳನ್ನು ನೋಡಿದ್ದೇನೆ. 7 ರಿಂದ 8 ಉಪಚುನಾವಣೆಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ಪಕ್ಷ ಕೊಟ್ಟಿದೆ ಎಂದಿದ್ದಾರೆ.

ಒಂದೂವರೆ ತಿಂಗಳಿಂದ ನಿರುದ್ಯೋಗಿಯಾಗಿದ್ದೇನೆ

ನಾನು ಕಳೆದ ಒಂದೂವರೆ ತಿಂಗಳಿಂದ ನಿರುದ್ಯೋಗಿಯಾಗಿ ಕುಳಿತಿದ್ದೇನೆ ಪಕ್ಷ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ ಎಂದಿದ್ದಾರೆ.

ಪಕ್ಷಕ್ಕಿಂತ ಯಾರೂ ದೊಡ್ಡವರಿಲ್ಲ 

ಗೋವಿಂದರಾಜನಗರದಲ್ಲಿ ನನ್ನ ಅವಧಿಯಲ್ಲಿ ಮೂಲ ಸೌಕರ್ಯ ನೀಡಿ ಅಭಿವೃದ್ಧಿ ಮಾಡಿದ್ದೇನೆ. ಒಬ್ಬ ರಾಜಕಾರಣಿಯಾಗಿ ಪಕ್ಷದ ಸಂದೇಶವನ್ನು ಕ್ಷೇತ್ರದಲ್ಲಿ ತಲುಪಿಸಿದ್ದೇನೆ. ಪಕ್ಷಕ್ಕಿಂತ ಯಾರೂ ದೊಡ್ಡವರಿಲ್ಲ. ಅದಕ್ಕಾಗಿ ಪಕ್ಷ ಕೊಟ್ಟ ಕೆಲಸ ಚಾಚೂ ತಪ್ಪದೇ ಮಾಡಬೇಕಾಗುತ್ತದೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES