Sunday, November 3, 2024

ಮಾದಪ್ಪನ ಬೆಟ್ಟದಲ್ಲಿ ಬೆಳ್ಳಿ ರಥಕ್ಕೆ ಚಾಲನೆ, ಸೇವೆಗೆ 2001 ರೂ. ನಿಗದಿ

ಚಾಮರಾಜನಗರ : ಉಘೇ.. ಉಘೇ.. ಮಾದಪ್ಪ! ಇನ್ನುಮುಂದೆ ಮಾದಪ್ಪನ ಭಕ್ತರಿಗೆ ಹೊಸ ಬೆಳ್ಳಿ ರಥ ಸೇವೆಗೆ ಮುಕ್ತವಾಗಿದೆ.

ಹೌದು, ಇಂದು ಮಲೈಮಹದೇಶ್ವರ ಬೆಟ್ಟದಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಅಧಿಕೃತವಾಗಿ ಬೆಳ್ಳಿ ರಥಕ್ಕೆ ಚಾಲನೆ ನೀಡಿದ್ದಾರೆ. ಬೆಳಗ್ಗೆ 8 ಗಂಟೆಗೆ ಬೆಳ್ಳಿ ರಥೋತ್ಸವ ಮಾಡಿಸಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಬೆಳ್ಳಿ ರಥೋತ್ಸವಕ್ಕೆ 2001 ರೂ. ಅನ್ನು ಪ್ರಾಧಿಕಾರ ನಿಗದಿ ಮಾಡಿದೆ.

ಮಲೈಮಹದೇಶ್ವರ ಬೆಟ್ಟದ ಪ್ರಾಧಿಕಾರದಿಂದ ಬೆಳ್ಳಿ ರಥ ನಿರ್ಮಾಣವಾಗಿದ್ದು, ದೇವಸ್ಥಾನ ‌ಪ್ರಾಧಿಕಾರ ರಾತ್ರಿ ವೇಳೆ ಚಿನ್ನ ರಥಯಾತ್ರೆ ನಡೆಸುತ್ತಿದೆ. ಇನ್ನುಮುಂದೆ ಬೆಳ್ಳಿ ರಥೋತ್ಸವ ಸೇವೆ ಮಾಡಿಸಲು ಭಕ್ತರಿಗೆ ಅವಕಾಶ ನೀಡಲಾಗಿದೆ. ರಾಜ್ಯದಲ್ಲೇ ಮಲೈಮಹದೇಶ್ವರ ದೇವಾಲಯ ಎರಡನೇ ಸ್ಥಾನದಲ್ಲಿದೆ. ದಿನೇ ದಿನೆ ಭಕ್ತರನ್ನು ಆಕರ್ಷಿಸುತ್ತಿರುವ ಮಲೈಮಹದೇಶ್ವರ ದೇಗುಲ ಆದಾಯದಲ್ಲೂ‌ ಮುಂದಿದೆ.

ಇದನ್ನೂ ಓದಿ : ಒಂದುವರೆ ತಿಂಗಳಲ್ಲಿ ಕೋಟಿ ಕೋಟಿ ಸಂಪಾದಿಸಿದ ಮಲೆ ಮಾದಪ್ಪ

533 ಕಿಲೋ ಬೆಳ್ಳಿ ಬಳಸಿ ರಥ

ಕಳೆದ ಎರಡು ವರ್ಷಗಳಿಂದಲೂ ಬೆಳ್ಳಿ ರಥ ನಿರ್ಮಾಣ ಕಾರ್ಯ ನಡೆದಿತ್ತು. ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ 533 ಕಿಲೋ ಬೆಳ್ಳಿ ಬಳಸಿ ರಥ ನಿರ್ಮಿಸಲಾಗ್ತಿದೆ. ಭಕ್ತರು ಹುಂಡಿಗೆ ಹಾಕುವ ಬೆಳ್ಳಿ ಹಾಗೂ ದಾನಿಗಳಿಂದಲೂ ಕೂಡ ಪಡೆದು ನಿರ್ಮಿಸಲಾಗಿದೆ.

ಬೆಳ್ಳಿ ರಥಕ್ಕೆ ತಗುಲಿರುವ ಖರ್ಚು ವೆಚ್ಚವನ್ನು ದಾನಿಗಳೇ ನೀಡಿದ್ದಾರೆ. ಈ ಹಿನ್ನಲೆ ಪ್ರಾಧಿಕಾರ ಸರ್ಕಾರದ ಗಮನಕ್ಕೆ ತಂದು ಸೇವೆಗೆ ದರ ನಿಗದಿಪಡಿಸಿದೆ. ನಿತ್ಯ ಬೆಳ್ಳಿ ರಥದ ಸೇವೆ ಬೆಳಗೆಗ 9 ಗಂಟೆಗೆ ನಡೆಸಲು ನಿರ್ಧರಿಸಲಾಗಿದೆ.

RELATED ARTICLES

Related Articles

TRENDING ARTICLES