ನಾವು ಇತ್ತೀಚಿಗೆ ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ದೋಷ ಇರುವರನ್ನ ನೋಡಿದ್ದೇವೆ .ಈಗಂತೂ ಚಿಕ್ಕ ಚಿಕ್ಕ ಮಕ್ಕಳು ಅವುಗಳ ಕಣ್ಣಿಗಿಂತ ದೊಡ್ಡ ಕನ್ನಡಕ ನೇತುಹಾಕಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ.
ಹೌದು, ಫೋನ್, ಲ್ಯಾಪ್‌ಟಾಪ್ ವಿಪರೀತ ಬಳಕೆಯಲ್ಲಿ ನಮ್ಮ ಕಣ್ಣುಗಳ ಆರೋಗ್ಯ, ಕಾಳಜಿ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದೇವೆ. ಕಣ್ಣಿನ ದೃಷ್ಟಿ ಏನಾಗಬಹುದು ಎಂಬ ಅಲ್ಪವೂ ಅರಿವಿಲ್ಲದೇ ಫೋನ್‌ಗಳನ್ನು ದಿನವಿಡೀ ಸ್ಕ್ರೋಲ್ (Scroll) ಮಾಡುತ್ತಿದ್ದೇವೆ.
ಹಾಗಾದರೆ ನಮ್ಮ ಪುಟ್ಟ ಕಣ್ಣುಗಳ ಕಾಳಜಿ ಹೇಗೆ? ಬಿಡುವಿಲ್ಲದ ಸ್ಕ್ರೀನ್ ಟೈಮ್ ಮಧ್ಯೆ ಇವುಗಳನ್ನು ಸುರಕ್ಷಿತವಾಗಿರಿಸುವುದು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
ಇದನ್ನೂ ಓದಿ: ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣಾ ಆಯೋಗ ರಚನೆ
ಕಣ್ಣುಗಳಿಗೆ ಸರಳ ವ್ಯಾಯಾಮ
- ಕಣ್ಣು ಮಿಟುಕಿಸುವುದು
- ಕಣ್ಣು ಮಿಟುಕಿಸುವಂತೆ, ಕಣ್ಣು ತಿರುಗಿಸುವುದು ಮತ್ತೊಂದು ಆರೋಗ್ಯಕರ ವಿಧಾನ
- ಮೇಲೆ-ಕೆಳಗೆ ನೋಡುವುದು ಈ ಯೋಗದಿಂದ ಚಿಕಿತ್ಸೆಯು ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ
- ಭ್ರಮರಿ ಪ್ರಾಣಾಯಾಮ
- ಕಣ್ಣಿಗೆ ವಿಶ್ರಾಂತಿ ಕೊಡಿ
ನಾವು ಹೀಗೆ ಕಣ್ಣುಗಳಿಗೆ ವಿಶ್ರಾಂತಿ ಕೂಡುವ ಮೂಲಕ ನಮ್ಮ ಕಣ್ಣಿನ ಆರೈಕೆ ಮಾಡಬಹುದು.