Monday, December 23, 2024

ಉದ್ಯೋಗ ಮೇಳದಲ್ಲಿ ಗೋಲ್ ಮಾಲ್! : ಉದ್ಯೋಗ ಆಕಾಂಕ್ಷಿಗಳಿಂದ 300 ರೂ. ವಸೂಲಿ

ಹಾಸನ : ಉದ್ಯೋಗ ಮೇಳದಲ್ಲಿ ಖಾಸಗಿ ಕಂಪೆನಿಯೊಂದು ಉದ್ಯೋಗ ಆಕಾಂಕ್ಷಿಗಳಿಂದ ಹಣ ವಸೂಲಿ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಶನಿವಾರ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಇಲಾಖೆ, ಕಲಾ ಕಾಲೇಜು, ಯುವ ಜನತೆಯ ಸಬಲೀಕರಣ, ದಿಶಾ ಗ್ರೂಪ್ಸ್ ಎಂಬ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಆಯೋಜಿಸಲಾಗಿತ್ತು.

ಈ ವೇಳೆ ಖಾಸಗಿ ಕಂಪೆನಿಯೊಂದು ವಿದ್ಯಾರ್ಥಿಗಳಿಂದ ನೋಂದಾವಣಿ ಶುಲ್ಕದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿತ್ತು. ಇದರಿಂದ ಆಕ್ರೋಶಗೊಂಡ ಉದ್ಯೋಗ ಆಕಾಂಕ್ಷಿಗಳು ಅರ್ಜಿಗಳಿಗೆ ಬೆಂಕಿ ಹಚ್ಚಿದ್ದಾರೆ. ಇದನ್ನು ಖಂಡಿಸಿ ಕೆಲ ವಿಧ್ಯಾರ್ಥಿಗಳು ಪ್ರತಿಭಟನೆಗೂ ಮುಂದಾದರು. ಬಳಿಕ, ಪೊಲೀಸರ ಮಧ್ಯಸ್ಥಿಕೆಯಲ್ಲಿ ಹಣ ವಾಪಸ್ ಕೊಡಿಸಲಾಗಿದೆ.

300 ರೂ. ಶುಲ್ಕ ವಸೂಲಿ

ಉದ್ಯೋಗ ಅರಸಿ ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯ ಉದ್ಯೋಗ ಆಕಾಂಕ್ಷಿಗಳು ಕಲಾ ಕಾಲೇಜಿಗೆ ಬಂದಿದ್ದರು. ಈ ವೇಳೆ ದಿಶಾ ಗ್ರೂಪ್ಸ್ ಸಂಸ್ಥೆಯಿಂದ ನೋಂದಾವಣಿ ಹೆಸರಿನಲ್ಲಿ ತಲಾ 300 ರೂ. ಶುಲ್ಕ ಪಡೆದಿದೆ. ಉದ್ಯೋಗ ಮೇಳದಲ್ಲಿ ಭಗವಹಿಸುವ ಸರ್ಕಾರಿ ಕಲಾ ಕಾಲೇಜು ವಿಧ್ಯಾರ್ಥಿಗಳಿಗೆ ಮಾತ್ರ ವಿನಾಯಿತಿ ನೀಡಿ ಇನ್ನುಳಿದ, ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ ತಲಾ 300 ರೂ. ಪಡೆದಿದ್ದಾರೆ. ಇದು ಉದ್ಯೋಗ ಅರಸಿ ಬಂದಿದ್ದ ಬಡ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 21 ಮಕ್ಕಳು ಅಸ್ವಸ್ಥ

ಮಾಲೀಕನ ವಿರುದ್ಧ ತರಾಟೆ

ಈ ಬಗ್ಗೆ ಪ್ರಾಂಶುಪಾಲ ಪುಟ್ಟರಾಜು ಮಾತನಾಡಿ, ಜಿಲ್ಲೆಯಲ್ಲಿನ ನಿರುದ್ಯೋಗಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ. ಹಣ ವಸೂಲಿ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ದಿಶಾ ಗ್ರೂಪ್ಸ್ ಸಂಸ್ಥೆಯ ಮಾಲೀಕ ಪುನೀತ್ ನನ್ನು ಕರೆಸಿ ಪ್ರಾಂಶುಪಾಲ ಪುಟ್ಟರಾಜು ತರಾಟೆ ತೆಗೆದುಕೊಂಡರು. ತಮ್ಮ ಈ ಕೆಲಸದಿಂದ ನಮ್ಮ ಕಾಲೇಜಿಗೆ ಕೆಟ್ಟ ಹೆಸರು ಬರಲಿದೆ. ಇಂಥಹ ಕೆಲಸ ಮಾಡಕೂಡದು ಎಂದು ಎಚ್ಚರಿಸಿದ್ದಾರೆ.

RELATED ARTICLES

Related Articles

TRENDING ARTICLES