ದೇವನಹಳ್ಳಿ : ಉತ್ತರ ಕರ್ನಾಟಕಕ್ಕೆ ಎರಡು ಕಿಲೋ ಜೋಳ, ಎಂಟು ಕಿಲೋ ಅಕ್ಕಿ ಕೊಡ್ತೀವಿ. ಈ ರೀತಿ ಸಿಸ್ಟಮ್ ಮಾಡಿಕೊಂಡಿದ್ದೇವೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು.
ದೇವನಹಳ್ಳಿ ತಾಲೂಕಿನ ಯಲಿಯೂರು ಗ್ರಾಮದಲ್ಲಿ ಶನಿವಾರ ಶಾಲಾ ಕಟ್ಟಡ ಉದ್ಘಾಟಿಸಿದ ಬಳಿಕ ಕೇಂದ್ರ ಸರ್ಕಾರ ಅಕ್ಕಿ ಕೊಡಲು ನಿರಾಕರಣೆ ವಿಚಾರ ಕುರಿತು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶಿಘ್ರದಲ್ಲೆ ಅಕ್ಕಿಯನ್ನು ಕೊಡುತ್ತೇವೆ. ನಮ್ಮದೆಯಾದಂತಹ ಪ್ಲಾನ್ ರೂಪಿಸಿದ್ದೇವೆ. ಕೇಂದ್ರದ ಮೂರು ಸಾಂಸ್ಥಿಕ ಸಂಸ್ಥೆಗಳಿವೆ, ಆ ಸಂಸ್ಥೆಗಳ ಮೂಲಕ ಅಕ್ಕಿ ಕೊಡುವ ತಿರ್ಮಾನ ಮಾಡಿದ್ದೇವೆ. ಬೆಳಗ್ಗೆ ಒಂದು ಸಭೆ ಮಾಡಿದ್ದೇನೆ, ಸಂಜೆ ಮುಖ್ಯಮಂತ್ರಿಗಳ ಜೊತೆ ಅಂತಿಮ ಮಾತುಕತೆ ಇದೆ. ಆದಾದ ಮೇಲೆ 15 ರಿಂದ 20 ದಿನ ಸಮಯ ಕೊಡ್ತೀವಿ. ಅಷ್ಟೋರೊಳಗೆ ಅಕ್ಕಿ ಸಪ್ಲೈ ಮಾಡಬೇಕು ಅಂತ ಹೇಳ್ತಿವಿ ಎಂದರು.
ಇದನ್ನೂ ಓದಿ : ಸಿದ್ದರಾಮಯ್ಯ ಬಾಯಿ ಬಿಟ್ಟ ದಿನ ಸರ್ಕಾರ ಇರೊಲ್ಲ : ಕೆ.ಎಸ್ ಈಶ್ವರಪ್ಪ
ದಕ್ಷಿಣಕ್ಕೆ 2 ಕೆಜಿ ರಾಗಿ, 8 ಕೆಜಿ ಅಕ್ಕಿ ಕೊಡ್ತೀವಿ
ಆದಷ್ಟು ಬೇಗ ಅಕ್ಕಿಯನ್ನು ಕೊಡುವ ಏರ್ಪಾಡು ಮಾಡುತ್ತೇವೆ. ಅವರು ಕೊಡಲಿಲ್ಲ, ಕೇಂದ್ರದ ಬಳಿ ಸಂಗ್ರಹ ಇದ್ದರು ಕೊಡಲಿಲ್ಲ. ಆದ್ದರಿಂದ ನಮ್ಮದೆಯಾದಂತಹ ದಾರಿಯಲ್ಲಿ ಹೋಗಿತ್ತಿದ್ದೇವೆ. ಆದಷ್ಟು ಬೇಗ ಕೊಡ್ತಿವಿ, ಎರಡು ವಿಭಾಗಗಳಲ್ಲಿ ಕೊಡುತ್ತೇವೆ. ದಕ್ಷಿಣಕ್ಕೆ ಎರಡು ಕಿಲೋ ರಾಗಿ, ಎಂಟು ಕಿಲೋ ಅಕ್ಕಿ ಕೊಡ್ತೇವೆ. ಉತ್ತರ ಕರ್ನಾಟಕಕ್ಕೆ ಎರಡು ಕಿಲೋ ಜೋಳ, ಎಂಟು ಕಿಲೋ ಅಕ್ಕಿ ಕೊಡುತ್ತೇವೆ ಎಂದು ಹೇಳಿದರು.
ನಾವು ಅಕ್ಕಿನೇ ಕೊಡ್ತೀವಿ, ವ್ಯವಸ್ಥೆ ಆಗಿದೆ
ಗ್ಯಾರಂಟಿ ಬಿಜೆಪಿ ಫುಲ್ ಫಿಲ್ ಮಾಡಬೇಕಾ? ಎನ್ನುವ ಬಿಜೆಪಿ ನಾಯಕರ ಹೇಳಿಕೆ ವಿಚಾರ ಕುರಿತು ಮಾತನಾಡಿ, ನಾವು ಕೇಳ್ತಿರೋದು ಭಾರತ ಸರ್ಕಾರವನ್ನ, ಯಾವ ರಾಜ್ಯದಲ್ಲಿ ಅಕ್ಕಿ ಜಾಸ್ತಿ ಇದೆಯೋ ಅದನ್ನು ಶೇಖರಣೆ ಮಾಡಬೇಕು. ಯಾವ ರಾಜ್ಯಕ್ಕೆ ಬೇಕಾಗಿದೆ ಅಕ್ಕಿ ಅದನ್ನ ಕೊಡೋದೆ ಕೇಂದ್ರ ಸರ್ಕಾರದ ಕೆಲಸ. ಅದೇ ಅವರ ಕೆಲಸ, ನಾವಿದ್ರು ಅವರಿದ್ರು ಮಾಡಲೇಬೇಕು. ನಾವು ಅಕ್ಕಿನೇ ಕೊಡ್ತೀವಿ, ವ್ಯವಸ್ಥೆ ಮಾಡಿಕೊಂಡಿದ್ದೇವೆ. ಸ್ವಲ್ಪ ತಡವಾಗಬಹುದು ಅಷ್ಟೆ. ಯಾಕಂದ್ರೆ ಕೇಂದ್ರ ಕೊಡ್ತಾರೆ ಅಂದುಕೊಂಡಿದ್ವಿ, ಆದ್ದರಿಂದ ತಡವಾಯ್ತು ಎಂದು ತಿಳಿಸಿದರು.