ಬೆಂಗಳೂರು : ಸಿದ್ದರಾಮಯ್ಯ ವಿರುದ್ಧ ಚುನಾವಣೆಯಲ್ಲಿ ನಿಲ್ಲೋಕೆ ನನಗೇನು ಹುಚ್ಚು ಹಿಡಿದಿತ್ತಾ? ಎಂದು ಮಾಜಿ ಸಚಿವ ವಿ. ಸೋಮಣ್ಣ ಫುಲ್ ಗರಂ ಆಗಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿರುವ ಆರ್. ಅಶೋಕ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ನಾನು ಚುನಾವಣೆಗೆ ಮುನ್ನವೇ ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೇನೆ. ನನಗೆ ನೂರು ದಿನ ಕೊಡಲಿ, ನಾನೇನು ಹೇಡಿ ಅಲ್ಲ. ನಾನು ತೆಗೆದುಕೊಳ್ಳುವ ಯಾವುದೇ ಹುದ್ದೆ ಆದರೂ ಅದನ್ನು, ಚಾಲೆಂಜ್ ಆಗಿ ತೆಗೆದುಕೊಳ್ತೇನೆ. ಅಶೋಕ್ ರಾಜ್ಯಾಧ್ಯಕ್ಷ ಆದ್ರೆ ಬೇಡ ಅಂತೀವಾ? ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯ ವಿರುದ್ಧ ನಾನು ಸ್ಪರ್ಧೆ ಮಾಡಲ್ಲ : ವಿ.ಸೋಮಣ್ಣ
ಅಶೋಕ್ ರಿಸ್ಕ್ ತಗೊಂಡಿಲ್ಲ
ನನ್ನ ಕಾರ್ಯವೈಖರಿನೇ ಬೇರೆ. ನಾನು ತಗೊಂಡಿರೋ ರಿಸ್ಕ್ ಇವರು ಯಾರು ತಗೊಂಡಿಲ್ಲ. ಕನಕಪುರದಲ್ಲಿ ಅಶೋಕ್ ರಿಸ್ಕ್ ತಗೊಂಡಿಲ್ಲ ಅಂತ ಜನರೇ ಮಾತಾಡಿಕೊಳ್ತಿದ್ದಾರೆ. ನಾನು ಪಕ್ಷದಲ್ಲಿ ತೆಗೆದುಕೊಂಡಿರೋ ಒಂದು ಚಾಲೆಂಜ್ ಅನ್ನು ಇವ್ರು ಯಾವುದಾದರೂ ಒಂದು ತಗೊಂಡಿದ್ದೀರಾ ಕೇಳಿ? ಎಂದು ಟಕ್ಕರ್ ಕೊಟ್ಟಿದ್ದಾರೆ.
ನಾನು ಚೆನ್ನಾಗಿ ಕೆಲಸ ಮಾಡಿದ್ದೇನೆ
ನಾನು ಉಪ ಚುನಾವಣೆ ಸೇರಿ ಹಲವು ಚುನಾವಣೆಗಳನ್ನು ಚಾಲೆಂಜ್ ಆಗಿ ತೆಗೆದುಕೊಂಡಿದ್ದೇನೆ. ಇವರೆಲ್ಲರಿಗಿಂತ ನಾನು ಚೆನ್ನಾಗಿ ಕೆಲಸ ಮಾಡಿದ್ದೇನೆ. ನನಗೇನು ಹುಚ್ಚು ಹಿಡಿದಿತ್ತಾ, ಸಿದ್ದರಾಮಯ್ಯ ವಿರುದ್ಧ ಚುನಾವಣೆ ನಿಲ್ಲೋಕೆ? ಪ್ರಧಾನಿಗಳನ್ನು ಹೊರತು ಪಡಿಸಿ, ಅಮಿತ್ ಶಾ, ಜೆ.ಪಿ ನಡ್ಡಾ, ಬಿ.ಎಲ್ ಸಂತೋಷ್ ಸೇರಿ ಎಲ್ಲರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.