Monday, May 13, 2024

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆಯಲ್ಲಿ ಓಡಾಡ್ತೀರಾ ಆಗಿದ್ರೆ ಈ ರೂಲ್ಸ್ ಫಾಲೋ ಮಾಡ್ಲೇ ಬೇಕು

ರಾಮನಗರ: ಬೆಂಗಳೂರು-ಮೈಸೂರು (Bengaluru- Mysuru) ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ದಶಪಥ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಅಂದ್ರೆ ಈ ಹೈವಿಯಲ್ಲಿ ದಿನೇ ದಿನೇ ಅಪಘಾತಗಳನ್ನು ಹೆಚ್ಚಾಗು ಹಿನ್ನಲೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ವಾಹನ ಚಾಲಕರಿಗೆ ಕರಪತ್ರಗಳನ್ನು ನೀಡುವ ಮೂಲಕ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಮನಗರ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: 5ನೇ ದಿನ ಕಳೆದರೂ ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಸರ್ವರ್‌ ಪ್ರಾಬ್ಲಮ್

ಹೌದು,ರಾಮನಗರ ಜಿಲ್ಲಾ ಪೋಲಿಸ್ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬ ವಾಹನ ಸವಾರರಿಗೆ ರಸ್ತೆಯ ಸುರಕ್ಷತಾ ಕ್ರಮಗಳನ್ನು ಒಳಗೊಂಡ ಕರಪತ್ರಗಳನ್ನು ಹಂಚುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಕರಪತ್ರಗಳಲ್ಲಿ ಸಂಚಾರಿ ನಿಯಮಗಳ ಬಗ್ಗೆ ಹಲವು ರೂಲ್ಸ್ ಗಳನ್ನು ನೀಡಿದ್ದು ವಿಶೇಷವಾಗಿ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ರಾಮನಗರ ಪೊಲೀಸರು ಮನವಿ ಮಾಡಿದ್ದಾರೆ…

ವಾಹನ ಸವಾರರು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು

  • ದ್ವಿಚಕ್ರ ವಾಹನ ಸವಾರರು ಐ.ಎಸ್.ಐ. ಪ್ರಮಾಣೀಕೃತ ಹೆಲೆಟ್‌ಗಳನ್ನು ಧರಿಸಿ.
  • ನಿಧಾನವೇ ಪ್ರಧಾನ, ಅತೀವೇಗ ಅಪಾಯಕಾರಿ.
  • ಪಥ ಶಿಸ್ತು ಪಾಲಿಸಿ, ವಾಹನ ಚಾಲನೆ ಮಾಡಿ
  • ಕುಡಿದು ವಾಹನ ಚಾಲನೆ ಮಾಡಬೇಡಿ.
  • ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಬೇಡಿ.
  • ಎಡಬದಿಯಿಂದ ಓವರ್‌ ಟೇಕ್‌ ಮಾಡಬೇಡಿ.
  • ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಬೇಡಿ ಪಾದಚಾರಿಗಳಿಗೆ ಆದ್ಯತೆ ನೀಡಿ.
  • ಸೀಟ್‌ ಬೆಲ್ಟ್ ಧರಿಸಿ, ಸುರಕ್ಷಿತವಾಗಿರಿ.
  • ಮುಂದಿನ ವಾಹನದಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಿ.

ಇನ್ನೂ ಮುಂದಿನ ದಿನಗಳಲ್ಲಿ ಹೆದ್ದಾರಿಯಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ಪೋಲಿಸರು ವಿವಿಧ ಆಯಾಮಗಳಲ್ಲಿ ಸರ್ವೆ ಮಾಡಿ ಹೆಚ್ಚು ಅಪಘಾತ ಆಗುವ ಸ್ಥಳ ಗುರುತಿಸಿ ಬ್ಲಾಕ್ ಪಾಯಿಂಟ್ ಗಳನ್ನು ಗುರುತು ಮಾಡಲಾಗಿದ್ದು,ಆ ಸ್ಥಳಗಳಲ್ಲಿ ಹೆಚ್ಚಿನ ನಿಗಾವಹಿಸಲು ಮುಂದಾಗಿದ್ದಾರೆ…

  • ಪ್ರವೀಣ್ ಎಂಚ್ ರಾಮನಗರ

RELATED ARTICLES

Related Articles

TRENDING ARTICLES