Thursday, December 19, 2024

ಸಾವು ತಂದ ತೆಂಗಿನಕಾಯಿ

ಹಾಸನ: ತೆಂಗಿನ ಕಾಯಿ ಗೊನೆ ಬಿದ್ದು ಹೋಬಳಿಯ ಬಿ.ಚೋಳೇನಹಳ್ಳಿ ಗ್ರಾಮದ ಕಾಲೇಜು ವಿದ್ಯಾರ್ಥಿ ಪ್ರಜ್ವಲ್ (16) ಸಾವನ್ನಪ್ಪಿರುವ  ಘಟನೆ ಗುರುವಾರ ಶ್ರವಣಬೆಳಗೊಳದಲ್ಲಿ ನಡೆದಿದೆ. 

ಹೌದು, ಶ್ರವಣಬೆಳಗೊಳ ಹೊರ ವಲಯದ ಉತ್ತೇನಹಳ್ಳಿಯ ರವಿ ಮತ್ತು ಅನಸೂಯ ದಂಪತಿ ಬರಾಳು ಬಳಿ ಇರುವ ಬಿ.ಚೋಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು. ಶ್ರವಣಬೆಳಗೊಳದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ಪ್ರಜ್ವಲ್ ಪ್ರತಿನಿತ್ಯ ತೋಟದ ಕೆಲಸ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದ. ಅದೇ ರೀತಿ ಗುರುವಾರ ಮಳೆಯಾದ ಹಿನ್ನೆಲೆಯಲ್ಲಿ 9ಕ್ಕೆ ಗಾಳಿಗೆ ಮರದಿಂದ ತೆಂಗಿನಕಾಯಿಗಳು ಬಿದ್ದಿದ್ದು, ಅವುಗಳನ್ನು ಒಂದೆಡೆ ಸಾಗಿಸುತ್ತಿದ್ದ ವೇಳೆ ಮರದ ಮೇಲಿಂದ ತೆಂಗಿನಕಾಯಿಗಳ ಗೊನೆ ಏಕಾಏಕಿ ಈತನ ಮೇಲೆ ಬಿಂದಿದ್ದವು.

ಇದನ್ನೂ ಓದಿ: ಹುಂಡಿ ಕಳ್ಳತನ ಬಿಟ್ಟು ಸರಗಳ್ಳತನಕ್ಕಿಳಿದ ಖತರ್ನಾಕ್ ಗ್ಯಾಂಗ್

ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ. ಪ್ರಜ್ವಲ್ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿತ್ತು. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

RELATED ARTICLES

Related Articles

TRENDING ARTICLES